alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿ ಮೊರೆಯಿಟ್ಟರೂ ನೆರವಿಗೆ ಬರಲಿಲ್ಲ ಪೊಲೀಸರು

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕಾನೂನುಗಳಿದ್ದರೂ, ಕಾಮುಕರು ಮಾತ್ರ ತಮ್ಮ ದುಷ್ಕೃತ್ಯವನ್ನು ಮುಂದುವರೆಸುತ್ತಿದ್ದಾರೆ. ಹಲವು ಸಂದರ್ಭಗಳಲ್ಲಿ ಮರ್ಯಾದೆಗೆ ಅಂಜಿ ಮಹಿಳೆಯರು ದೂರು ನೀಡಲು ಮುಂದೆ ಬರುವುದಿಲ್ಲ.

ಇದರ ಮಧ್ಯೆ “ಮಿ ಟೂ” ಆಂದೋಲನ ಶುರುವಾಗಿದ್ದು, ಖ್ಯಾತ ನಟಿಯರು ಸೇರಿದಂತೆ ಹಲ ಸೆಲೆಬ್ರಿಟಿಗಳು ತಾವು ಅನುಭವಿಸಿದ ಲೈಂಗಿಕ ಕಿರುಕುಳದ ವಿವರವನ್ನು ಬಿಚ್ಚಿಟ್ಟಿದ್ದರು. ಆದರೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದ ಘಟನೆಯೊಂದು ಪೊಲೀಸರ ನಿರ್ಲಕ್ಷ್ಯತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ತನಗೆ ಕಿರುಕುಳ ನೀಡುತ್ತಿದ್ದ ಯುವಕರ ಕುರಿತು ಯುವತಿಯೊಬ್ಬಳು ನೆರವಿಗೆ ಮೊರೆಯಿಟ್ಟರೂ ಸ್ಪಂದಿಸಿಲ್ಲವೆನ್ನಲಾಗಿದೆ.

ಜನವರಿ 25 ರಂದು ರಾತ್ರಿ 8 ಗಂಟೆಗೆ ತನ್ನ ಮನೆಗೆ ತೆರುಳುತ್ತಿದ್ದ ದಾಮಿನಿ ಮಹೌರ್ ಎಂಬ ಯುವತಿಯ ಬೆನ್ನ ಹಿಂದೆ ಇಬ್ಬರು ಯುವಕರು ಬಿದ್ದಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಈ ಯುವಕರು ಬೈಕ್ ನಲ್ಲಿ ಹಿಂಬಾಲಿಸಿದ್ದು, ಅಶ್ಲೀಲ ಕಮೆಂಟ್ ಮಾಡಿದ್ದಾರೆ.

ಮೊದಲಿಗೆ ಇವರನ್ನು ನಿರ್ಲಕ್ಷಿಸಿದ ದಾಮಿನಿ ಅವರ ಉಪಟಳ ಮಿತಿಮೀರಿದಾಗ ಮಹಿಳಾ ಹೆಲ್ಪ್ ಲೈನಿಗೆ ಕರೆ ಮಾಡಿದ್ದಾರೆ. ಆದರೆ ಅವರಿಂದ ಯಾವುದೇ ನೆರವು ದೊರೆತಿಲ್ಲ.

ಕಡೆಗೆ ಹೇಗೋ ಅವರಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದು, ಇದರ ಮಧ್ಯೆ ದುಷ್ಕರ್ಮಿಗಳ ಪೋಟೋ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ತಮಗಾದ ಕಹಿ ಅನುಭವದ ಸಂಪೂರ್ಣ ವಿವರವನ್ನು ದಾ ಮಿನಿ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಹಾಕಿದ ಬಳಿಕ ಎಚ್ಚೆತ್ತ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...