alex Certify
ಕನ್ನಡ ದುನಿಯಾ       Mobile App
       

Kannada Duniya

35 ವರ್ಷಗಳ ಬಳಿಕ ಹೊಸ ದಾಖಲೆ ಮಾಡಿದೆ ರೈಲ್ವೆ ಇಲಾಖೆ

2017-18ರಲ್ಲಿ ಭಾರತೀಯ ರೈಲ್ವೆ ಇಲಾಖೆ ಸುರಕ್ಷತೆ ವಿಚಾರದಲ್ಲಿ ಹೊಸ ದಾಖಲೆ ಮಾಡಿದೆ. ಕಳೆದ 35 ವರ್ಷಗಳಲ್ಲಿ ರೈಲು ಅಪಘಾತಗಳ ಸಂಖ್ಯೆ ಕೇವಲ ಎರಡಂಕಿಯಲ್ಲಿರುವುದು ಇದೇ ಮೊದಲು.

ಮಾರ್ಚ್ 30ರ ಅಂಕಿ-ಅಂಶದಂತೆ 2017-18ರಲ್ಲಿ 73 ರೈಲು ಅಪಘಾತಗಳು ಸಂಭವಿಸಿವೆ. 2016-17ರಲ್ಲಿ ಈ ಸಂಖ್ಯೆ 104 ಇತ್ತು. 1968-69ರಲ್ಲಿ ರೈಲು ಅಪಘಾತಗಳ ಸಂಖ್ಯೆ ಮೂರಂಕಿಗೆ ಇಳಿಕೆಯಾಗಿತ್ತು.

ಅದಕ್ಕೂ ಹಿಂದಿನ ವರ್ಷ 1111 ಅಪಘಾತಗಳು ಸಂಭವಿಸಿದ್ದವು. 1968-69ರಲ್ಲಿ ಅಪಘಾತಗಳ ಸಂಖ್ಯೆ 908ಕ್ಕೆ ಇಳಿಕೆಯಾಗಿತ್ತು. 1980-81ರಲ್ಲಿ 1013 ಅಪಘಾತಗಳು ಸಂಭವಿಸಿದ್ದು ಬಿಟ್ರೆ, ಇದುವರೆಗೆ ಅಪಘಾತಗಳ ಸಂಖ್ಯೆ ಮೂರಂಕಿಯಲ್ಲೇ ಇತ್ತು.

ಹಳಿಗಳ ಸುರಕ್ಷತೆ ಬಗ್ಗೆ ರೈಲ್ವೆ ಇಲಾಖೆ ಹೆಚ್ಚಿನ ಗಮನಹರಿಸಿದ್ದೇ ಅಪಘಾತಗಳ ಸಂಖ್ಯೆ ಇಳಿಕೆಯಾಗಲು ಕಾರಣ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ. ರೈಲು ಹಳಿ ತಪ್ಪಿದ ಪ್ರಕರಣಗಳು ಕೂಡ ಕಡಿಮೆಯಾಗಿವೆ. 2016ರ ನವೆಂಬರ್ ನಲ್ಲಿ ಇಂದೋರ್-ಪಾಟ್ನಾ ಎಕ್ಸ್ ಪ್ರೆಸ್ ರೈಲು ಹಳಿತಪ್ಪಿದ್ದರಿಂದ 150 ಮಂದಿ ಮೃತಪಟ್ಟಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...