alex Certify
ಕನ್ನಡ ದುನಿಯಾ       Mobile App
       

Kannada Duniya

ನ್ಯೂಸ್ ಪೋರ್ಟಲ್ ನಿಯಂತ್ರಣಕ್ಕೆ ನಿಯಮ ರೂಪಿಸಲಿದೆ ಸರ್ಕಾರ

ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನ್ಯೂಸ್ ಪೋರ್ಟಲ್ ಹಾಗೂ ಮಾಧ್ಯಮ ವೆಬ್ ಸೈಟ್ ಗಳ ನಿಯಂತ್ರಣಕ್ಕಾಗಿ ನಿಯಮಗಳನ್ನು ರೂಪಿಸಲು ಮುಂದಾಗಿದೆ. ಇದಕ್ಕಾಗಿ 10 ಸದಸ್ಯರ ಸಮಿತಿಯೊಂದನ್ನು ರಚಿಸಿದೆ. ಸಮಿತಿ ಸದಸ್ಯರು ನ್ಯೂಸ್ ಪೋರ್ಟಲ್ ಹಾಗೂ ಮಾಧ್ಯಮ ವೆಬ್ಸೈಟ್ ಗಳ ನಿಯಂತ್ರಣಕ್ಕಾಗಿ ನಿಯಮ ರೂಪಿಸಲಿದ್ದಾರೆ.

ಏಪ್ರಿಲ್ 4ರಂದು ಬಿಡುಗಡೆ ಮಾಡಿದ ಆದೇಶದ ಪ್ರಕಾರ ಈ ಸಮಿತಿಯಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ  ಗೃಹ ಸಚಿವಾಲಯದ ಸದಸ್ಯರಿರಲಿದ್ದಾರೆ. ಇದ್ರ ಜೊತೆಗೆ ಕಾನೂನು ಇಲಾಖೆ ಹಾಗೂ ಪ್ರಸಾರ ಇಲಾಖೆ ಕಾರ್ಯದರ್ಶಿಗಳಿರಲಿದ್ದಾರೆ.

ಈ ಸಮಿತಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ), ನ್ಯೂಸ್ ಬ್ರಾಡ್ಕಾಸ್ಟ್ ಅಸೋಸಿಯೇಶನ್ ಮತ್ತು ಇಂಡಿಯನ್ ಬ್ರಾಡ್ಕ್ಯಾಸ್ಟರ್ಸ್ ಫೆಡರೇಶನ್ ಪ್ರತಿನಿಧಿಗಳನ್ನು ಒಳಗೊಂಡಿದೆ. ಖಾಸಗಿ ಮಾಧ್ಯಮಗಳು ಕಾರ್ಯಕ್ರಮ ಹಾಗೂ ಜಾಹೀರಾತು ಸಂಹಿತೆ ನಿಯಂತ್ರಣದಲ್ಲಿವೆ. ಮುದ್ರಣ ಮಾಧ್ಯಮಗಳನ್ನು ಪಿಸಿಐ ನಿಯಂತ್ರಿಸುತ್ತದೆ. ಆದ್ರೆ ನ್ಯೂಸ್ ಪೋರ್ಟಲ್ ಹಾಗೂ ಆನ್ಲೈನ್ ಮಾಧ್ಯಮಗಳನ್ನು ನಿಯಂತ್ರಿಸಲು ಯಾವುದೇ ನಿಯಮ ಹಾಗೂ ಮಾರ್ಗಸೂಚಿಗಳಿರಲಿಲ್ಲ. ಸುಳ್ಳು ಸುದ್ದಿಯ ಮೇಲೆ ನಿಯಂತ್ರಣ ಹೇರುವುದೇ ಇದ್ರ ಮುಖ್ಯ ಉದ್ದೇಶವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...