alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಒಂದೇ ಸೂರಿನಡಿ ಲಭ್ಯವಾಗಲಿದೆ ಕೇಂದ್ರದ ಎಲ್ಲ ಕಾನೂನು

ದೆಹಲಿ: ದೇಶದಲ್ಲಿರುವ ಸಾವಿರಾರು ಕಾನೂನುಗಳ ಬಗ್ಗೆ ಜನರಲ್ಲಿರುವ ಗೊಂದಲ ನಿವಾರಣೆಗೆ ಹಾಗೂ ಸೂಕ್ತ ಮಾಹಿತಿ ಒದಗಿಸುವ ಉದ್ದೇಶದಿಂದ ಎಲ್ಲ ಕಾನೂನುಗಳನ್ನು ಒಂದೇ ವೆಬ್ ಪೋರ್ಟಲ್ ನಲ್ಲಿ ತರಲು ಕೇಂದ್ರ ಸರಕಾರ ಮುಂದಾಗಿದೆ.

ದೇಶದಲ್ಲಿ ಕೇಂದ್ರ ಸರಕಾರ ರೂಪಿಸಿರುವ ಸಾವಿರಕ್ಕೂ ಹೆಚ್ಚು ಕಾನೂನುಗಳಿವೆ. ಇದರಿಂದ ಸಾರ್ವಜನಿಕರಿಗೆ ಕಾನೂನುಗಳ ಬಗ್ಗೆ ಮಾಹಿತಿ ಪಡೆಯಲು ತೊಂದರೆಯಾಗುತ್ತಿದೆ ಎಂದು 2016 ರಲ್ಲಿ ವನಶ್ ಶರದ್ ಗುಪ್ತಾ ಎನ್ನುವವರು ದೆಹಲಿ ಹೈಕೋರ್ಟ್ ನಲ್ಲಿ ಪಿಐಎಲ್ ದಾಖಲಿಸಿದ್ದರು.

ಕೇಂದ್ರ ಸರಕಾರಕ್ಕೆ ದೇಶದ ಎಲ್ಲ ಕಾನೂನು ಒಂದೇ ಸೂರಿನಡಿ ತರಲು ಯೋಜನೆ ರೂಪಿಸುವಂತೆ, ಹೈಕೋರ್ಟ್ ‌ನಿರ್ದೇಶನ ನೀಡಿದ್ದರಿಂದ, ಕೇಂದ್ರ ಸರಕಾರ ಈ‌ ನಿರ್ಧಾರಕ್ಕೆ ಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಂದ್ರ ಸರಕಾರ ನೂತನವಾಗಿ ರೂಪಿಸಲಿರುವ ವೆಬ್ ಸೈಟ್ ನಲ್ಲಿ, ಕೇಂದ್ರ ಸರಕಾರ ಸಾವಿರಕ್ಕೂ ಹೆಚ್ಚು ಕಾನೂನುಗಳು, ಅದಕ್ಕಿರುವ ಉಪ ಕಾನೂನು, ಕಾನೂನಿನ ಬಳಕೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...