alex Certify
ಕನ್ನಡ ದುನಿಯಾ       Mobile App
       

Kannada Duniya

107 ವರ್ಷದ ಪ್ರಸಿದ್ಧ ಯುಟ್ಯೂಬರ್ ಮಸ್ತಾನಮ್ಮ ಇನ್ನಿಲ್ಲ

ರುಚಿ ರುಚಿ ಅಡುಗೆ ಮೂಲಕ ರಾತ್ರೋ ರಾತ್ರಿ ಯುಟ್ಯೂಬ್ ನಲ್ಲಿ ಸದ್ದು ಮಾಡಿದ್ದ 107 ವರ್ಷದ ಅಜ್ಜಿ ಮಸ್ತಾನಮ್ಮ ಇನ್ನಿಲ್ಲ. ಮಸ್ತಾನಮ್ಮ ಯುಟ್ಯೂಬ್ ಫುಡ್ ಚಾನೆಲ್ ಮೂಲಕ ಲಕ್ಷಾಂತರ ಮಂದಿ ಮನಸ್ಸು ಗೆದ್ದಿದ್ದರು. ಕಂಟ್ರಿಫುಡ್ ಹೆಸರಿನ ಚಾನೆಲ್ ನಡೆಸುತ್ತಿದ್ದ ಮಸ್ತಾನಮ್ಮ ಒಂದೇ ವರ್ಷದಲ್ಲಿ 12 ಲಕ್ಷಕ್ಕಿಂತ ಹೆಚ್ಚು ಚಂದಾದಾರರನ್ನು  ಹೊಂದಿದ್ದರು.

ತೋಟದಲ್ಲಿ ಒಲೆಯುರಿಸಿ ಮಸ್ತಾನಮ್ಮ ಆಹಾರ ತಯಾರಿಸುತ್ತಿದ್ದರು. ಮಸ್ತಾನಮ್ಮ ಈ ಹಳ್ಳಿ ಶೈಲಿ ಎಲ್ಲರನ್ನು ಆಕರ್ಷಿಸಿತ್ತು. ಗುಂಟೂರು ಜಿಲ್ಲೆಯ ಗುಡಿವಾರಾ ಹಳ್ಳಿಯ ಮಸ್ತಾನಮ್ಮ ಜೀವನ ಕಷ್ಟಕರವಾಗಿತ್ತು. ಕುಟುಂಬಸ್ಥರ ಗಲಾಟೆ ನಂತ್ರ ಹಳ್ಳಿಯ ಇನ್ನೊಂದು ಕುಟುಂಬ ಅವ್ರನ್ನು ಸಾಕುತ್ತಿತ್ತು. ಹನ್ನೊಂದನೇ ವರ್ಷದಲ್ಲಿಯೇ ಮದುವೆಯಾಗಿದ್ದ ಮಸ್ತಾನಮ್ಮ 10 ವರ್ಷದಲ್ಲಿಯೇ ಪತಿಯನ್ನು ಕಳೆದುಕೊಂಡಿದ್ದರು.

ಮಸ್ತಾನಮ್ಮ ಅಷ್ಟರಲ್ಲೇ ಐದು ಮಕ್ಕಳಿಗೆ ಜನ್ಮ ನೀಡಿದ್ದರು. ಆದ್ರೆ ಸಾಂಕ್ರಾಮಿಕ ರೋಗಕ್ಕೆ ನಾಲ್ಕು ಮಕ್ಕಳು ಬಲಿಯಾಗಿದ್ದರು. ಒಬ್ಬ ಮಗನ ಜೊತೆ ಬದುಕಿನ ಹೋರಾಟ ಶುರು ಮಾಡಿದ್ದ ಮಸ್ತಾನಮ್ಮ ಎಲ್ಲೂ ಹಿಂದೆ ಬೀಳಲಿಲ್ಲ. 2016 ರಲ್ಲಿ ಸ್ನೇಹಿತರ ಜೊತೆ ಮೊಮ್ಮಗ ಊರಿಗೆ ಬಂದಾಗ ಮಸ್ತಾನಮ್ಮ ಬದನೆಕಾಯಿ ಸಾಂಬಾರ್ ಮಾಡಿದ್ದರು. ಅದು ಎಲ್ಲರಿಗೂ ಇಷ್ಟವಾಗಿತ್ತು, ಮೊಮ್ಮಗ ಅಜ್ಜಿ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದ. ಒಂದು ವರ್ಷದಲ್ಲಿ 75 ಲಕ್ಷ ಮಂದಿ ಇದನ್ನು ನೋಡಿದ್ದರು.

ನಂತ್ರ ಮೊಮ್ಮಗ ಯುಟ್ಯೂಬ್ ಚಾನೆಲ್ ಶುರು ಮಾಡಿದ್ದ. ಮೊದಲು ರೆಸಪಿ ಮಾತ್ರ ಹೇಳಲಾಗ್ತಾಯಿತ್ತು. ನಂತ್ರ ಮಸ್ತಾನಮ್ಮ ಯುಟ್ಯೂಬ್ ನಲ್ಲಿ ಮಿಂಚಲು ಶುರು ಮಾಡಿದ್ರು. 106 ವರ್ಷದ ಅಜ್ಜಿ ಯುಟ್ಯೂಬ್ ನಲ್ಲಿ ರುಚಿ ರುಚಿ ಅಡುಗೆ ಮಾಡ್ತಿದ್ದರೆ ಜನರು ಇಷ್ಟಪಟ್ಟು ಅದನ್ನು ನೋಡ್ತಿದ್ದರು. 106 ನೇ ಜನ್ಮದಿನದಂದು ಅಮೆರಿಕಾ, ಬ್ರಿಟನ್, ಪಾಕಿಸ್ತಾನದಿಂದ ಮಸ್ತಾನಮ್ಮರಿಗೆ ಉಡುಗೊರೆಗಳು ಬಂದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...