alex Certify
ಕನ್ನಡ ದುನಿಯಾ       Mobile App
       

Kannada Duniya

ಆರೋಪಿಗಳ ಪತ್ತೆಗೆ ನೆರವಾಯ್ತು ಯುವತಿ ನೀಡಿದ್ದ ಆ ನಂಬರ್

one-lucky-coincidence-helps-police-crack-open-the-auto-molestation-case-of-a-23yo-thane-girlಚಲಿಸುತ್ತಿರುವ ಆಟೋದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿದ್ದ 23 ವರ್ಷದ ಯುವತಿಯೊಬ್ಬಳು ತಾನು ನೆನಪಿಟ್ಟುಕೊಂಡಿದ್ದ ಆಟೋ ರಿಜಿಸ್ಟ್ರೇಷನ್ ನಂಬರ್ ಪೈಕಿ ಒಂದು ಅಂಕಿಯನ್ನು ಹೇಳಿದ್ದು, ಆಕೆ ಲೈಂಗಿಕ ಕಿರುಕುಳಕ್ಕೊಳಗಾದ ಆಟೋ ರಿಜಿಸ್ಟ್ರೇಷನ್ ನಂಬರ್ ನಲ್ಲಿ ಆ ಸಂಖ್ಯೆ ಇರದಿದ್ದರೂ ಕಾಕಾತಾಳೀಯವೆಂಬಂತೆ ಅದೇ ಆಟೋದಲ್ಲಿ ಆಕೆಗೆ ಕಿರುಕುಳ ನೀಡಿದ್ದ ಮತ್ತೊಬ್ಬ ಚಾಲಕನ ಆಟೋದಲ್ಲಿ ಆ ನಂಬರ್ ಇದ್ದ ಕಾರಣ ಇಬ್ಬರೂ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಮಹಾರಾಷ್ಟ್ರದ ಥಾಣೆಯಲ್ಲಿ ಜೂನ್ 7 ರ ರಾತ್ರಿ ಸಂತ್ರಸ್ಥ ಯುವತಿ ಮನೆಗೆ ತೆರಳಲು ಆಟೋ ಏರಿದ್ದಳು. ಇದೇ ಆಟೋದಲ್ಲಿ ಚಾಲಕನ ಜೊತೆ ಮತ್ತೊಬ್ಬನಿದ್ದು, ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದರು. ಆಕೆ ಪ್ರತಿಭಟಿಸಿದಾಗ ನಿರ್ಜನ ಪ್ರದೇಶದಲ್ಲಿ ಕೆಳಕ್ಕೆ ತಳ್ಳಿ ಪರಾರಿಯಾಗಿದ್ದರು. ಯುವತಿ ನವಪಾಡಾ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದಳು.

ಆಟೋ ರಿಜಿಸ್ಟ್ರೇಷನ್ ನಂಬರ್ ಪೈಕಿ 3 ಎಂಬ ಸಂಖ್ಯೆ ಕಂಡಿದ್ದಾಗಿ ಆಕೆ ಮಾಹಿತಿ ನೀಡಿದ್ದಳು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಆರೋಪಿಗಳ ಪತ್ತೆಗೆ 10 ತಂಡಗಳನ್ನು ರಚಿಸಿದ್ದರು. 3 ಸಂಖ್ಯೆ ಹೊಂದಿದ್ದ ಸುಮಾರು 6 ಸಾವಿರ ಆಟೋಗಳ ಪಟ್ಟಿ ತರಿಸಿಕೊಂಡ ಪೊಲೀಸರು ವ್ಯಾಪಕ ತನಿಖೆ ನಡೆಸಿದ್ದರು. ಈ ಮಧ್ಯೆ 3 ಸಂಖ್ಯೆ ಹೊಂದಿದ್ದ ಆಟೋ ಚಾಲಕ ಸಂತೋಷ್ ಅಲಿಯಾಸ್ ವಿಜಯ್ ನಾಮದೇವ್ ಲೋಕಂಡೆ ಎಂಬಾತ ಕೆಲ ದಿನಗಳಿಂದ ಆಟೋ ಓಡಿಸುತ್ತಿಲ್ಲವೆಂಬ ಮಾಹಿತಿ ಪೊಲೀಸರಿಗೆ ದೊರಕಿತ್ತು. ಆತನ ಪತ್ನಿಯೂ ತನ್ನ ಪತಿ ಕೆಲ ದಿನಗಳಿಂದ ನಾಪತ್ತೆಯಾಗಿರುವುದಾಗಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. 3 ಸಂಖ್ಯೆ ಹೊಂದಿದ್ದ ಆಟೋ ಒಂದು ಮೂರ್ನಾಲ್ಕು ದಿನಗಳಿಂದ ಲೂಯಿಸ್ ವಾಡಿ ಏರಿಯಾದಲ್ಲಿ ಅನಾಥವಾಗಿ ನಿಂತಿರುವುದು ಪತ್ತೆಯಾಗಿತ್ತು.

ವಿಸ್ತೃತ ತನಿಖೆ ನಡೆಸಿದ ಪೊಲೀಸರಿಗೆ ವಿಜಯ್ ನಾಮದೇವ್ ಲೋಕಂಡೆ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ವಿಷಯ ತಿಳಿದುಬಂತು. ಆತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ ವೇಳೆ ತನ್ನ ಸ್ನೇಹಿತ ಲಹು ಲಕ್ಷ್ಮಣ್ ಗಗಾರೆ ಎಂಬಾತನ ಜೊತೆ ಸೇರಿ ಈ ಕೃತ್ಯವೆಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಲೈಂಗಿಕ ಕಿರುಕುಳದ ವಿಚಾರ ಮಾಧ್ಯಮಗಳಲ್ಲಿ ವರದಿಯಾಗಿದ್ದು ಹಾಗೂ ಪೊಲೀಸರು ಬಂಧನಕ್ಕೆ ಅವಿರತ ಪ್ರಯತ್ನ ನಡೆಸುತ್ತಿರುವುದನ್ನು ಅರಿತು ಭೀತಿಗೊಂಡ ತಾನು ತಪ್ಪಿಸಿಕೊಳ್ಳುವ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾಗಿ ಒಪ್ಪಿಕೊಂಡಿದ್ದಾನೆ. ಇದೀಗ ಇಬ್ಬರನ್ನೂ ಹೆಡೆಮುರಿ ಕಟ್ಟಿರುವ ಪೊಲೀಸರು ಜೈಲಿಗಟ್ಟಿದ್ದಾರೆ. ಯುವತಿ ಲೈಂಗಿಕ ಕಿರುಕುಳಕ್ಕೊಳಗಾದ ಆಟೋ ರಿಜಿಸ್ಟ್ರೇಷನ್ ನಂಬರ್ MH 04 FC 2518 ಆಗಿದ್ದು, ಇದರಲ್ಲಿ 3 ಎಂಬ ಸಂಖ್ಯೆಯೇ ಇರಲಿಲ್ಲ. ಆದರೆ ಕಾಕಾತಾಳೀಯವೆಂಬಂತೆ ಪ್ರಕರಣದ ಮತ್ತೊಬ್ಬ ಆರೋಪಿ ವಿಜಯ್ ನಾಮದೇವ್ ಲೋಕಂಡೆ ಓಡಿಸುತ್ತಿದ್ದ ಆಟೋ ರಿಜಿಸ್ಟ್ರೇಷನ್ ನಂಬರ್ ನಲ್ಲಿ 3 ಎಂಬ ಸಂಖ್ಯೆ ಇದ್ದು, ಆರೋಪಿಗಳ ಬಂಧನಕ್ಕೆ ಇದು ನೆರವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...