alex Certify
ಕನ್ನಡ ದುನಿಯಾ       Mobile App
       

Kannada Duniya

ಪದ್ಮಾವತ್ ನೋಡಲು ಹೋದ ಉದ್ಯಮಿ ಮನೆ ದೋಚಿದ ಕಳ್ಳರು

ದೆಹಲಿಯ ಅಮರ್ ಕಾಲೋನಿ ಉದ್ಯಮಿಯೊಬ್ಬರ ಮನೆಯಲ್ಲಿ 1 ಕೋಟಿ ರೂಪಾಯಿ ಕಳ್ಳತನವಾಗಿದೆ. ಘಟನೆ ವೇಳೆ ಉದ್ಯಮಿ ಕುಟುಂಬಸ್ಥರ ಜೊತೆ ಪದ್ಮಾವತ್ ಚಿತ್ರ ನೋಡಲು ನೋಯ್ಡಾಗೆ ತೆರಳಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಬಂಗಾರ, ನಗದನ್ನು ದೋಚಿದ್ದಾರೆ. ಘಟನೆ ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಚಿತ್ರ ಮುಗಿಸಿ ಮನೆಗೆ ಬಂದ ವೇಳೆ ಗೇಟ್ ತೆರೆದಿತ್ತಂತೆ. ಒಳಗೆ ಹೋಗಿ ನೋಡಿದವರು ದಂಗಾಗಿದ್ದಾರೆ. ಕಪಾಟಿನ ಬಾಗಿಲು ಮುರಿದು ಕಳ್ಳರು ಸುಮಾರು 90 ಲಕ್ಷ ರೂಪಾಯಿ ಮೌಲ್ಯದ ಬಂಗಾರ ಹಾಗೂ 10 ಲಕ್ಷ ರೂಪಾಯಿ ನಗದನ್ನು ಕದ್ದೊಯ್ದಿದ್ದಾರೆ.

ಸಿಸಿ ಟಿವಿಯಲ್ಲಿ ಕಳ್ಳರ ಕರಾಮತ್ತು ರೆಕಾರ್ಡ್ ಆಗಿದೆ. ಮೂವರು ಕಳ್ಳರು ಮನೆಗೆ ನುಗ್ಗಿ ಹಣ, ಬಂಗಾರ ದೋಚಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...