alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿಗೆ ಲೈಂಗಿಕ ದೌರ್ಜನ್ಯ ನೀಡಿದ್ದ ಕಾಮುಕ ಅಂದರ್

ಭೋಜ್‌ಪುರಿ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಜಾವೇದ್ ಎಂದು ಗುರುತಿಸಲಾಗಿದ್ದು, ಈತ ಉತ್ತರಪ್ರದೇಶದ ಅಘಾಪುರ್ ಗ್ರಾಮದ ಸೆಕ್ಟರ್ 41ರ ನಿವಾಸಿಯಾಗಿದ್ದಾನೆ.

ಆರೋಪಿ ಮದ್ಯ ವ್ಯಸನಿಯಾಗಿದ್ದು, ಕಟ್ಟಡ ನಿರ್ಮಾಣದ ದಿನಗೂಲಿ ಕಾರ್ಮಿಕನಾಗಿದ್ದಾನೆ. ಆತನನ್ನು ಅಘಾಪುರದ ಬಸ್ ನಿಲ್ದಾಣದಲ್ಲಿ ಬಂಧಿಸಲಾಯಿತು. ಆತ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ. ತಲೆಮರೆಸಿಕೊಂಡಿರುವ ಉಳಿದ ಇಬ್ಬರು ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ನಟಿ, ಸದಾರ್ಪುರ್ ಕಾಲೋನಿಯ ಸೆಕ್ಟರ್ 45ರಲ್ಲಿ ಮುಂಜಾನೆಯ ವಾಕಿಂಗ್ ಹೋಗುತ್ತಿರುವಾಗ ಆರೋಪಿಗಳು ಆಕೆಯನ್ನು ಎಳೆದೊಯ್ದು ದೌರ್ಜನ್ಯ ಎಸಗಿದ್ದರು. ಮೂವರು ವ್ಯಕ್ತಿಗಳು ತನ್ನನ್ನು ಪೊದೆಯತ್ತ ಎಳೆದೊಯ್ದು ಬಟ್ಟೆಯನ್ನು ಹರಿಯಲು ಯತ್ನಿಸಿದರು ಎಂದು ನಟಿ ದೂರು ದಾಖಲಿಸಿದ್ದರು. ನಟಿ ಕಿರುಚಿಕೊಂಡಾಗ ಜನರು ನೆರವಿಗೆ ದೌಡಾಯಿಸಿದ್ದು, ತಕ್ಷಣ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...