alex Certify
ಕನ್ನಡ ದುನಿಯಾ       Mobile App
       

Kannada Duniya

ಶಬರಿಮಲೆ ವಿವಾದ: ಸರ್ವಪಕ್ಷ ಸಭೆ ಕರೆದ ಕೇರಳ ಸರ್ಕಾರ

ತಿರುವನಂತಪುರ:  ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಕುರಿತು ತಾನು ಹಿಂದೆ ನೀಡಿದ್ದ ತೀರ್ಪಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಮುಂದೇನು ಮಾಡಬೇಕೆಂಬ ಬಗ್ಗೆ ಕೇರಳ ಸರ್ಕಾರ ನ.15 ರಂದು ಸರ್ವಪಕ್ಷ ಸಭೆ ಕರೆದಿದೆ.

10ರಿಂದ 50 ವಯಸ್ಸಿನ ಮಹಿಳೆಯರಿಗೂ ಅಯ್ಯಪ್ಪ ದರ್ಶನಕ್ಕೆ ಅವಕಾಶ ಕೊಡಬೇಕೆಂದು ಸುಪ್ರಿಂಕೋರ್ಟ್ ಸೂಚನೆ ನೀಡಿದ ಬಳಿಕ ಕೇರಳಾದ್ಯಂತ ಹೋರಾಟ ನಡೆದಿದ್ದು, ಈಗಲೂ ಪ್ರತಿಭಟನೆ ನಿರಂತರವಾಗಿ ಸಾಗಿದೆ. ಅಲ್ಲದೇ ಪ್ರತಿ ವರ್ಷ ನಡೆಯುವ ಮಂಡಲ ಮಕ್ಕಳವಿಲ್ಲಕ್ಕು ನವೆಂಬರ್ 17ರಿಂದ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೂರ್ವ ತಯಾರಿ ಮಾಡುವ ಕುರಿತಂತೆ ಈ ಸಭೆ ನಿರ್ಧಾರ ಮಾಡಲಿದೆ.

ಅಕ್ಟೋಬರ್ ನಲ್ಲಿ ಐದು ದಿನಗಳ ಪೂಜೆ ವೇಳೆ ಸರಣಿ ಪ್ರತಿಭಟನೆ ನಡೆದಿದ್ದು, ಕಾನೂನು ಸುವ್ಯವಸ್ಥೆಗೆ ಭಂಗ ತಂದ ಕಾರಣಕ್ಕೆ 3700 ಜನರನ್ನು ಬಂಧಿಸಿ 546 ಪ್ರಕರಣ ದಾಖಲಿಸಲಾಗಿತ್ತು. ಇದೀಗ ನವೆಂಬರ್ 17ರಿಂದ ಆರಂಭವಾಗುವ ದರ್ಶನಕ್ಕೆ 500 ಕ್ಕೂ ಅಧಿಕ ಮಹಿಳೆಯರು ಅವಕಾಶ ಕೋರಿ ನೋಂದಣಿ ಮಾಡಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...