alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಗೆ ನುಗ್ಗಿದ ಕಳ್ಳರು ಕೊಂಡೂ ಹೋದ್ರು, ಉಂಡೂ ಹೋದ್ರು

ಕನ್ಯಾಕುಮಾರಿಯಲ್ಲಿ ಜೈಲಿಗೆ ಕರೆತರುವ ಸಂದರ್ಭದಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿರುವ ಕಳ್ಳನಿಗಾಗಿ ತೀವ್ರ ಶೋಧ ನಡೆಯುತ್ತಿದೆ. 23 ವರ್ಷದ ಡೇವಿಡ್ ದೇವೇಂದ್ರನ್ ಎಂಬಾತ ಖಾಕಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ.

ಇನ್ನೋರ್ವ 22 ವರ್ಷದ ಮಣಿಕಂದನ್ ಕೂಡ ಪರಾರಿಯಾಗಿದ್ದ, ಆದ್ರೆ ಪೊಲೀಸರು ಅವನನ್ನು ಮತ್ತೆ ಸೆರೆಹಿಡಿದಿದ್ದಾರೆ. ಕೇರಳದಾದ್ಯಂತ ಹುಡುಕಾಟ ನಡೆಯುತ್ತಿದೆ. ವಿಚಾರಣೆ ಬಳಿಕ ಬುಧವಾರ ರಾತ್ರಿ ತಿರುನಲ್ವೇಲಿಯಿಂದ ಇಬ್ಬರನ್ನೂ ಕರೆತರಲಾಗುತ್ತಿತ್ತು.

ಡೇವಿಡ್ ಹಾಗೂ ಮಣಿಕಂದನ್ ಇಬ್ಬರೂ ಪೊಲೀಸ್ ಪೇದೆಯನ್ನು ತಳ್ಳಿ ಕೆಳಕ್ಕೆ ಬೀಳಿಸಿ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ಗುರುವಾರ ಮಧ್ಯಾಹ್ನ ಇಬ್ಬರೂ ಸೇತುವೆಯೊಂದರ ಕೆಳಗೆ ನಿಂತು ಮಾತನಾಡುತ್ತಿದ್ದುದು ಪೊಲೀಸರ ಕಣ್ಣಿಗೆ ಬಿದ್ದಿತ್ತು. ಪೊಲೀಸರು ಮಣಿಕಂದನ್ ನನ್ನು ಹಿಡಿಯಲು ಯಶಸ್ವಿಯಾದ್ರು.

ಇಬ್ಬರ ವಿರುದ್ಧವೂ ಬೇರೆ ಬೇರೆ ರಾಜ್ಯಗಳಲ್ಲಿ ಡಜನ್ ಗಟ್ಟಲೆ ಪ್ರಕರಣಗಳು ದಾಖಲಾಗಿವೆ. 200 ಪೊಲೀಸರು ಕಳ್ಳನಿಗಾಗಿ ಶೋಧ ನಡೆಸುತ್ತಿದ್ದಾರೆ. ನೆಸಮೊನಿ ನಗರದಲ್ಲಿರೋ ಮನೆಯೊಂದಕ್ಕೆ ಇಬ್ಬರೂ ಕನ್ನ ಹಾಕಿದ್ರು. ಅಲ್ಲಿದ್ದ ವಸ್ತುಗಳನ್ನೆಲ್ಲ ದೋಚಿಕೊಂಡು ಅಡುಗೆ ಮಾಡಿಕೊಂಡು ತಿಂದಿದ್ದಾರೆ. ಗಡದ್ದಾಗಿ ತಿಂದು ಎಸ್ಕೇಪ್ ಆಗುವ ಸಂದರ್ಭದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...