alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಚ ತೆಗೆದುಕೊಳ್ಳುವಾಗ ಸಿಕ್ಕಿ ಬಿದ್ದ ಐಎಎಸ್ ಅಧಿಕಾರಿ

509082-guptaಪಾಟ್ನಾ: ಐ.ಎ.ಎಸ್. ಅಧಿಕಾರಿಯೊಬ್ಬರು ಟ್ರಕ್ ಮಾಲೀಕರಿಂದ ಲಂಚ ಪಡೆದುಕೊಳ್ಳುವ ವೇಳೆ ಭ್ರಷ್ಟಾಚಾರ ನಿಗ್ರಹದಳದ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. 2013 ನೇ ಬ್ಯಾಚ್ ನ ಬಿಹಾರ್ ಕೇಡರ್ ನ ಐ.ಎ.ಎಸ್. ಅಧಿಕಾರಿ ಡಾ. ಜಿತೇಂದ್ರ ಗುಪ್ತಾ, ಲಂಚ ಪಡೆಯುವಾಗ ಸಿಕ್ಕಿ ಬಿದ್ದ ಅಧಿಕಾರಿಯಾಗಿದ್ದು, ಅವರನ್ನು ಈಗ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಜುಲೈ 4 ರಂದು ಜಮ್ಶೆಡ್ ಪುರದಿಂದ ರಾಜಸ್ಥಾನಕ್ಕೆ ತೆರಳುತಿದ್ದ ಟ್ರಕ್ ಗಳು ನಿಗದಿ ಪಡಿಸಿದ್ದಕ್ಕಿಂತ ಹೆಚ್ಚುವರಿ ಲೋಡ್ ಹೊಂದಿದ್ದವು. ಇವುಗಳನ್ನು ಹಿಡಿದ ಜಿತೇಂದ್ರ ಗುಪ್ತಾ, ಒಂದೂವರೆ ಲಕ್ಷ ರೂ. ಗಳಿಗೆ ಡಿಮ್ಯಾಂಡ್ ಮಾಡಿದ್ದು, ಅಂತಿಮವಾಗಿ 80 ಸಾವಿರ ರೂ. ಗಳಿಗೆ ವ್ಯವಹಾರ ಕುದುರಿಸಲಾಗಿತ್ತು.

ಟ್ರಕ್ ಮಾಲೀಕ ಈ ವಿಚಾರವನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ತಿಳಿಸಿದ್ದು, ಅಧಿಕಾರಿಗಳು, ಡಾ. ಜಿತೇಂದ್ರ ಗುಪ್ತ ಟ್ರಕ್ ಮಾಲೀಕರಿಂದ 80 ಸಾವಿರ ರೂ. ಪಡೆಯುವಾಗಲೇ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...