alex Certify
ಕನ್ನಡ ದುನಿಯಾ       Mobile App
       

Kannada Duniya

ಡಿ.15ರಿಂದ ಜನವರಿ 5ರೊಳಗೆ ನಡೆಯಲಿದೆ ಚಳಿಗಾಲದ ಅಧಿವೇಶನ

ಸಂಸತ್ ಚಳಿಗಾಲದ ಅಧಿವೇಶನ ಡಿಸೆಂಬರ್ 15ರಿಂದ ಜನವರಿ 5ರೊಳಗೆ ನಡೆಯುವ ಸಾಧ್ಯತೆಯಿದೆ. ವಿರೋಧ ಪಕ್ಷಗಳ ಕೋಪಕ್ಕೆ ತುತ್ತಾದ ಸರ್ಕಾರ ಡಿಸೆಂಬರ್ 15ರಿಂದ ಚಳಿಗಾಲದ ಅಧಿವೇಶನ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.

ಚಳಿಗಾಲದ ಅಧಿವೇಶನದ ಕುರಿತು ವಿರೋಧ ಪಕ್ಷ ಕಾಂಗ್ರೆಸ್, ಸರ್ಕಾರದ ಮೇಲೆ ಆಕ್ರಮಣ ಮಾಡಿತ್ತು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಅನೇಕ ನಾಯಕರು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಮೋದಿ ಸರ್ಕಾರಕ್ಕೆ ಸಂಸತ್ ಕಲಾಪ ಎದುರಿಸುವ ಧೈರ್ಯವಿಲ್ಲ ಎಂದಿದ್ದರು. ಉದ್ದೇಶಪೂರ್ವಕವಾಗಿ ಮೋದಿ ಸರ್ಕಾರ ಸಂಸತ್ ಕಲಾಪವನ್ನು ಮುಂದೂಡುತ್ತಿದೆ ಎಂದು ದೂರಿದ್ದರು.

ಕಾಂಗ್ರೆಸ್ ವಿರೋಧಕ್ಕೆ ಉತ್ತರ ನೀಡಿದ ಅರುಣ್ ಜೇಟ್ಲಿ, ಚುನಾವಣೆ ಹಿನ್ನೆಲೆಯಲ್ಲಿ ಅಧಿವೇಶನ ವಿಳಂಬವಾಗ್ತಿದೆ ಎಂದಿದ್ದರು. ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಅಧಿವೇಶನ ವಿಳಂಬವಾಗ್ತಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...