alex Certify
ಕನ್ನಡ ದುನಿಯಾ       Mobile App
       

Kannada Duniya

ಪಾರ್ಕಿಂಗ್ ಲಾಟ್ ನಲ್ಲೇ ಟೆಕ್ಕಿಯ ಬರ್ಬರ ಹತ್ಯೆ

anjali-rathour-650_650x400_51496231344

ನೊಯ್ಡಾದಲ್ಲಿ 25 ವರ್ಷದ ಮಹಿಳೆಯೊಬ್ಬಳನ್ನು ಆಕೆಯ ಅಪಾರ್ಟ್ ಮೆಂಟ್ ನ ಪಾರ್ಕಿಂಗ್ ಲಾಟ್ ನಲ್ಲೇ ಹತ್ಯೆ ಮಾಡಲಾಗಿದೆ. ಖಾಸಗಿ ಮೊಬೈಲ್ ಕಂಪನಿಯಲ್ಲಿ ಕೆಲಸ ಮಾಡ್ತಾ ಇದ್ದ ಎಂಜಿನಿಯರ್ ಅಂಜಲಿ ರಾಥೋಡ್ ಹತ್ಯೆಯಾದ ಮಹಿಳೆ. ಶತಾಬ್ಧಿ ರೈಲ್ ವಿಹಾರ್ ಕಾಂಪ್ಲೆಕ್ಸ್ ನ ಸೆಕ್ಟರ್ 62ರಲ್ಲಿ ಈಕೆ ವಾಸವಾಗಿದ್ಲು.

ಎಂಜಿನಿಯರ್ ಹತ್ಯೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಳಗ್ಗೆ 6.34ರ ಸಮಯದಲ್ಲಿ ವ್ಯಕ್ತಿಯೊಬ್ಬ ಅಂಜಲಿಯ ಬೆನ್ನಟ್ಟಿ ಬಂದಿದ್ದ. ನಂತರ ಆಕೆ ಮೇಲೆ ಹಲವು ಬಾರಿ ಗುಂಡು ಹಾರಿಸಿದ್ದಾನೆ. ತೀವ್ರ ರಕ್ತಸ್ರಾವದಿಂದ ಅಂಜಲಿ ಅಲ್ಲೇ ಕುಸಿದು ಬಿದ್ದಿದ್ಲು.

ಕೋಚಿಂಗ್ ಕ್ಲಾಸ್ ಗೆ ಹೊರಟಿದ್ದ ಅಂಜಲಿಯ ರೂಮ್ ಮೇಟ್ ಸುಮಾರು ಹೊತ್ತಿನ ಬಳಿಕ ಆಕೆ ಕೊಲೆಯಾಗಿರೋದನ್ನು ಗಮನಿಸಿದ್ದಾಳೆ. ಅಂಜಲಿಯ ಹೆತ್ತವರು ಹರಿಯಾಣದಲ್ಲಿ ವಾಸವಾಗಿದ್ದಾರೆ. ಯಾರೋ ಪರಿಚಿತರೇ ಈ ಕೃತ್ಯ ಎಸಗಿದ್ದಾರೆ ಅಂತಾ ಅನುಮಾನ ವ್ಯಕ್ತಪಡಿಸಿದ್ದಾರೆ.

ಬೆಳಗ್ಗೆ ಅಂಜಲಿಗೆ ಫೋನ್ ಕಾಲ್ ಬಂದಿತ್ತು. ಕಾಲ್ ರಿಸೀವ್ ಮಾಡಿದವಳೇ ಮೂರನೇ ಮಹಡಿಯಿಂದ ಕೆಳಕ್ಕೆ ಬಂದಿದ್ಲು. ಈ ವೇಳೆ ಅವಳ ಬೆನ್ನಟ್ಟಿ ಬಂದ ದುಷ್ಕರ್ಮಿ ಗುಂಡು ಹಾರಿಸಿದ್ದಾನೆ. ಯೂನಿವರ್ಸಿಟಿಯಲ್ಲಿ ಅಂಜಲಿಯ ಸಹಪಾಠಿಯಾಗಿದ್ದ ವ್ಯಕ್ತಿಯೊಬ್ಬ ಕೊಲೆ ಮಾಡಿದ್ದಾನೆ ಅಂತಾ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...