alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರ್ ತಡೆದಿದ್ದಕ್ಕೆ ಖಾಕಿಗೇ ಕಪಾಳ ಮೋಕ್ಷ

slap

ಪಂಜಾಬ್ ನಲ್ಲಿ ಪೊಲೀಸ್ ಪೇದೆಯ ಕೆನ್ನೆಗೆ ಬಾರಿಸಿ, ಕಾಲಿನಿಂದ ಒದ್ದ ಆರೋಪದ ಮೇಲೆ 29 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಹಿಮಾಂಶು ಮಿತ್ತಲ್ ಬಂಧಿತ ಆರೋಪಿ. ಈತ ಬಿಎಂಡಬ್ಲ್ಯೂ ಕಾರಿನಲ್ಲಿ ರಸ್ತೆಯ ರಾಂಗ್ ಸೈಡಿನಲ್ಲಿ ಹೋಗ್ತಾ ಇದ್ದ.

ಪಟಿಯಾಲದ ಖಾಂಡಾ ಚೌಖ್ ನಲ್ಲಿ ಹಿಮಾಂಶು ಸಂಚಾರ ನಿಯಮ ಉಲ್ಲಂಘಿಸಿದ್ದನ್ನು ಗಮನಿಸಿದ ಪೊಲೀಸ್ ಪೇದೆ ಓಂ ಪ್ರಕಾಶ್, ಆತನನ್ನು ತಡೆದಿದ್ದಾರೆ. ಕಾರಿನ ಲೈಸೆನ್ಸ್ ಮತ್ತು ಇತರ ದಾಖಲೆಗಳನ್ನು ತೋರಿಸುವಂತೆ ಸೂಚಿಸಿದ್ದಾರೆ.

ಮೊದಲು ಪೇದೆಯೊಂದಿಗೆ ವಾಗ್ವಾದಕ್ಕಿಳಿದ ಹಿಮಾಂಶು, ಕಾರಿನಿಂದ ಇಳಿದು ಅವರ ಕಪಾಳಕ್ಕೆ ಬಾರಿಸಿದ್ದಾನೆ. ಅಷ್ಟೇ ಅಲ್ಲ ಕಾಲಿನಿಂದ ಒದ್ದಿದ್ದಾನೆ. ಇದನ್ನೆಲ್ಲ ಗಮನಿಸುತ್ತಿದ್ದ ಪ್ರತ್ಯಕ್ಷದರ್ಶಿಯೊಬ್ಬರು ಘಟನೆಯನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.

ಈ ವಿಡಿಯೋ ವೈರಲ್ ಆಗಿದೆ. ಸದ್ಯ ಹಿಮಾಂಶು ಮಿತ್ತಲ್ ನನ್ನು ಬಂಧಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸ್ ಪೇದೆ ಕಾರನ್ನು ತಡೆದ ಸಂದರ್ಭದಲ್ಲಿ, ಹಿಮಾಂಶು ಬಳಿ ಲೈಸನ್ಸ್ ಹಾಗೂ ರಜಿಸ್ಟ್ರೇಶನ್ ದಾಖಲೆಗಳೇ ಇರಲಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...