alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ದಿಬ್ಬಣದಲ್ಲಿ ನಡೀತು ಭಾರೀ ಅನಾಹುತ

ಛತ್ತೀಸ್ ಗಢದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾರೀ ಅನಾಹುತವಾಗಿದೆ. ದಿಢೀರನೆ ಎಸ್ ಯು ವಿ ಕಾರೊಂದು ನುಗ್ಗಿ ಬಂದಿದ್ದರಿಂದ 25 ಮಂದಿ ಗಾಯಗೊಂಡಿದ್ದಾರೆ. ಮದುವೆ ದಿಬ್ಬಣ ಕಲ್ಯಾಣ ಮಂಟಪದತ್ತ ಹೊರಟಿತ್ತು. ಅತಿಥಿಗಳೆಲ್ಲ ರಸ್ತೆಯಲ್ಲಿ ಡಾನ್ಸ್ ಮಾಡುತ್ತಿದ್ರು.

ಸ್ಕಾರ್ಪಿಯೋ ವಾಹನದಲ್ಲಿ ವರ ಪ್ರಯಾಣಿಸುತ್ತಿದ್ದ. ನಿಧಾನವಾಗಿ ಸಾಗುತ್ತಿದ್ದ ಕಾರು ದಿಢೀರನೆ ನಿಯಂತ್ರಣ ಕಳೆದುಕೊಂಡಿದೆ. ಚಾಲಕ ಬ್ರೇಕ್ ಮೇಲೆ ಕಾಲಿಡುವ ಬದಲು ಎಕ್ಸಲರೇಟರ್ ಒತ್ತಿಬಿಟ್ಟಿದ್ದಾನೆ. ಕ್ಷಣಮಾತ್ರದಲ್ಲಿ ಕಾರು ನರ್ತಿಸುತ್ತಿದ್ದ ಜನರತ್ತ ನುಗ್ಗಿ ಬಂದಿದೆ.

ಹೆದರಿದ ಜನರು ಭಯದಲ್ಲಿ ಚೀರುತ್ತ ತಪ್ಪಿಸಿಕೊಳ್ಳಲು ಓಡಿದ್ದಾರೆ. ಈ ವೇಳೆ ಕಾಲ್ತುಳಿತವೂ ಉಂಟಾಗಿದೆ. ಈ ಅವಘಡದಲ್ಲಿ ಸುಮಾರು 25 ಜನರು ಗಾಯಗೊಂಡಿದ್ದಾರೆ. ಛತ್ತೀಸ್ ಗಢದ ಜಂಗ್ಜಿರ್ ಚಂಪಾ ಜಿಲ್ಲೆಯಲ್ಲಿ ಈ ಅವಘಡ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...