alex Certify
ಕನ್ನಡ ದುನಿಯಾ       Mobile App
       

Kannada Duniya

OMG ! 2018 ರಲ್ಲಿವೆ 16 ದೀರ್ಘ ವಾರಾಂತ್ಯ ರಜೆ

ಕಳೆದ ವರ್ಷ ದೀರ್ಘಾವಧಿ ರಜೆ ಇಲ್ಲದೇ ಬೇಸರಗೊಂಡವರಿಗೆ ಸಿಹಿ ಸುದ್ದಿ ಇಲ್ಲಿದೆ. 2018 ರಲ್ಲಿ ಬರೋಬ್ಬರಿ 16 ದೀರ್ಘ ವಾರಾಂತ್ಯ ರಜೆಗಳಿದ್ದು, ಈಗಿನಿಂದಲೇ ನಿಮ್ಮ ಪ್ರವಾಸದ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಿ.

ಜನವರಿ 20 ಶನಿವಾರ, ಜನವರಿ 21 ಬಾನುವಾರ ವೀಕೆಂಡ್ ಜೊತೆಗೆ 22 ರಂದು ಸೋಮವಾರ ಬಸಂತ್ ಪಂಚಮಿ ರಜೆ ಇದೆ. ಜನವರಿ 26 ರಂದು ಶುಕ್ರವಾರ ಗಣರಾಜ್ಯೋತ್ಸವ, 27 ಶನಿವಾರ ವಾರಾಂತ್ಯ ರಜೆ, 28 ಭಾನುವಾರ ರಜೆ ಇದೆ.

ಫೆಬ್ರವರಿ 10 ಶನಿವಾರ, 11 ರಂದು ಭಾನುವಾರ ವೀಕೆಂಡ್ ರಜೆ, 12 ರಂದು ಸೋಮವಾರ ಲೀವ್ ಹಾಕಿದಲ್ಲಿ 13 ರಂದು ಮಂಗಳವಾರ ಮಹಾಶಿವರಾತ್ರಿ ರಜೆ ಇರುತ್ತದೆ.

ಮಾರ್ಚ್ 1 ರಂದು ಗುರುವಾರ ಚೋಟಿ ಹೋಳಿ, 2 ರಂದು ಶುಕ್ರವಾರ ಹೋಳಿ, 3 ಶನಿವಾರ, 4 ಭಾನುವಾರ ವೀಕೆಂಡ್, ಮಾರ್ಚ್ 29 ರಂದು ಗುರುವಾರ ಮಹಾವೀರ ಜಯಂತಿ, 30 ರಂದು ಶುಕ್ರವಾರ ಗುಡ್ ಫ್ರೈಡೇ, 31 ರಂದು ಶನಿವಾರ ಹಾಗೂ ಏಪ್ರಿಲ್ 1 ರಂದು ಭಾನುವಾರ ವಾರಾಂತ್ಯ ರಜೆ ಇದೆ.

ಏಪ್ರಿಲ್ 28 ಶನಿವಾರ, 29 ಭಾನುವಾರ ವಾರಾಂತ್ಯ ರಜೆ, 30 ರಂದು ಸೋಮವಾರ ಬುದ್ಧ ಪೂರ್ಣಿಮೆ, ಮೇ ತಿಂಗಳಲ್ಲಿ ಯಾವುದೇ ದೀರ್ಘ ವಾರಾಂತ್ಯದ ರಜೆ ಇರುವುದಿಲ್ಲ.

ಜೂನ್ 15 ರಂದು ಶುಕ್ರವಾರ ಈದ್ ಉಲ್ ಫಿತ್ರ್, 16 ರಂದು ಶನಿವಾರ, 17 ರಂದು ಭಾನುವಾರ ರಜೆ ಇದೆ. ಜುಲೈನಲ್ಲಿ ಯಾವುದೇ ದೀರ್ಘ ವಾರಾಂತ್ಯ ರಜೆಗಳಿಲ್ಲ.

ಆಗಸ್ಟ್ 15 ಬುಧವಾರ ಸ್ವಾತಂತ್ರ್ಯ ದಿನಾಚರಣೆ, 16 ಗುರುವಾರ, 17 ಶುಕ್ರವಾರ ಲೀವ್ ಹಾಕಿದಲ್ಲಿ 18 ರಂದು ಶನಿವಾರ, 19 ರಂದು ಭಾನುವಾರ ರಜೆ ಇದೆ. 22 ರಂದು ಬುಧವಾರ ಬಕ್ರೀದ್, 23 ಗುರುವಾರ, 24 ಶುಕ್ರವಾರ ಲೀವ್ ಹಾಕಿದಲ್ಲಿ 25 ರಂದು ಶನಿವಾರ, 26 ರಂದು ಭಾನುವಾರ ರಜೆ ಇದೆ.

ಸೆಪ್ಟಂಬರ್ 1 ಶನಿವಾರ, 2 ರಂದು ಭಾನುವಾರ ವೀಕೆಂಡ್, 3 ರಂದು ಸೋಮವಾರ ಜನ್ಮಾಷ್ಟಮಿ, 13 ರಂದು ಗುರುವಾರ ಗಣೇಶ ಚತುರ್ಥಿ, 14 ರಂದು ಲೀವ್ ಹಾಕಿದಲ್ಲಿ 15 ಶನಿವಾರ, 16 ಭಾನುವಾರ ವಾರಾಂತ್ಯ ರಜೆ ಇರಲಿದೆ.

ಸೆಪ್ಟಂಬರ್ 29 ಶನಿವಾರ, 30 ರಂದು ಭಾನುವಾರ ಜೊತೆಗೆ, ಅಕ್ಟೋಬರ್ 1 ರಂದು ಸೋಮವಾರ ಸಿಕ್ ಲೀವ್ ಹಾಕಿದಲ್ಲಿ ಅಕ್ಟೋಬರ್ 2 ರಂದು ಮಂಗಳವಾರ ಗಾಂಧಿ ಜಯಂತಿ ರಜೆ ಇದೆ. ಅಕ್ಟೋಬರ್ 18 ರಂದು ಗುರುವಾರ ಆಯುಧಪೂಜೆ, 19 ರಂದು ಶುಕ್ರವಾರ ವಿಜಯದಶಮಿ, 20 ರಂದು ಶನಿವಾರ, 21 ರಂದು ಭಾನುವಾರ ರಜೆ ಇದೆ.

ನವೆಂಬರ್ 1 ಗುರುವಾರ ಕನ್ನಡ ರಾಜ್ಯೋತ್ಸವ, ನವೆಂಬರ್ 2 ರಂದು ಶುಕ್ರವಾರ ಲೀವ್ ಹಾಕಿದಲ್ಲಿ, 3 ಶನಿವಾರ, 4 ರಂದು ಭಾನುವಾರ, 5 ರಂದು ಸೋಮವಾರ ಧನ್ ತೇರಾಸ್, 6 ಮಂಗಳವಾರ ಲೀವ್ ಹಾಕಿದಲ್ಲಿ, 7 ಬುಧವಾರ ದೀಪಾವಳಿ, 8 ಗುರುವಾರ ಗೋವರ್ಧನ ಪೂಜೆ, 9 ಶುಕ್ರವಾರ ಭಾಯಿ ಧೂಜ್, 10 ಶನಿವಾರ, 11 ಭಾನುವಾರ ರಜೆ ಇದೆ.

ಡಿಸೆಂಬರ್ 22 ಶನಿವಾರ, 23 ರಂದು ಭಾನುವಾರ ವೀಕೆಂಡ್ ಜೊತೆಗೆ 24 ರಂದು ಸೋಮವಾರ ರಜೆ ಹಾಕಿದಲ್ಲಿ 25 ರಂದು ಮಂಗಳವಾರ ಕ್ರಿಸ್ ಮಸ್ ರಜೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...