alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ದೆವ್ವದ ಸೆಲ್ಫಿ

Ghost-selfie_01ಇತ್ತೀಚೆಗೆ ಸೆಲ್ಫಿ ಕ್ರೇಜ್ ವಿಪರೀತವಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ವಿಭಿನ್ನವಾಗಿ ಸೆಲ್ಫಿ ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ಅತಿ ಹೆಚ್ಚು ಲೈಕ್ಸ್ ಗಳಿಸಬೇಕೆಂಬ ಹಪಾಹಪಿಗೆ ಬಿದ್ದು ಹಲವರು ದುರಂತ ಸಾವನ್ನಪ್ಪಿದ್ದಾರೆ. ಮನುಷ್ಯರಿಗಷ್ಟೇ ಅಲ್ಲ ದೆವ್ವಗಳಿಗೂ ಸೆಲ್ಫಿ ಕ್ರೇಜ್ ಇದೆಯಾ ಎಂಬ ಪ್ರಶ್ನೆ ಹುಟ್ಟು ಹಾಕುವಂತೆ ಮಾಡಿದೆ ಈ ಚಿತ್ರ.

ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ಈ ಚಿತ್ರ ಮೇಲ್ನೋಟಕ್ಕೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ಒಂದು ಸಾಮಾನ್ಯ ಚಿತ್ರ ಎಂಬಂತೆ ಭಾಸವಾಗುತ್ತದೆ. ಆದರೆ ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಸೆಲ್ಫಿಯ ವಿಶೇಷತೆ ಗಮನಕ್ಕೆ ಬರುತ್ತದೆ.

ಚಿತ್ರದಲ್ಲಿರುವ ಪುರುಷ ಹಿಂಬದಿಯ ಕನ್ನಡಿಯಲ್ಲಿ ಬೆನ್ನು ತಿರುಗಿಸಿದಂತೆ ಕಂಡು ಬರುತ್ತದೆ. ಆದರೆ ಮಹಿಳೆ ಮಾತ್ರ ಮುಂಭಾಗದಲ್ಲಿ ಸೆಲ್ಫಿಗೆ ಪೋಸ್ ನೀಡಿದ್ದರೂ ಹಿಂಬದಿಯ ಕನ್ನಡಿಯಲ್ಲೂ ಆಕೆಯ ಮುಖ ನೇರವಾಗಿ ಕಾಣಿಸುತ್ತಿದೆ. ಪುರುಷನಂತೆ ಮಹಿಳೆಯ ಬೆನ್ನು ಹಿಂಬದಿಯಲ್ಲಿರುವ ಕನ್ನಡಿಯಲ್ಲಿ ಕಾಣಿಸಬೇಕಾಗಿದ್ದು, ಇದು ಫೋಟೋಶಾಪ್ ಉಪಯೋಗಿಸಿ ಮಾಡಿರುವ ತಂತ್ರವೋ ಅಥವಾ ದೆವ್ವವೇ ಸೆಲ್ಫಿಗೆ ಪೋಸ್ ನೀಡಿದೆಯೋ ಒಟ್ಟಿನಲ್ಲಿ ಈ ಚಿತ್ರ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...