alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವ್ಯಕ್ತಿಯ ಹೊಟ್ಟೆಯಲ್ಲಿತ್ತು ಒಂದಲ್ಲ ಎರಡಲ್ಲ 639 ಉಗುರು…!

ಕೊಲ್ಕತ್ತಾ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ವಿಚಿತ್ರ ಘಟನೆ ನಡೆದಿದೆ. ಶಸ್ತ್ರಚಿಕಿತ್ಸೆ ವೇಳೆ ರೋಗಿ ಹೊಟ್ಟೆಯಲ್ಲಿ ಸಿಕ್ಕ ವಸ್ತು ನೋಡಿ ವೈದ್ಯರೇ ದಂಗಾಗಿದ್ದಾರೆ. ರೋಗಿ ಹೊಟ್ಟೆಯಲ್ಲಿ 639 ಉಗುರು ಸಿಕ್ಕಿದೆ.

ಕೊಲ್ಕತ್ತಾದ ನಿವಾಸಿ 48 ವರ್ಷದ ವ್ಯಕ್ತಿ ಪ್ರತಿದಿನ ಉಗುರು ಕಚ್ಚುತ್ತಿದ್ದ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿ ಅನೇಕ ಬಾರಿ ವಾಂತಿ ಕೂಡ ಮಾಡಿಕೊಳ್ಳುತ್ತಿದ್ದ. ವಾರದ ಹಿಂದೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನೀಡಿದ ವೈದ್ಯರು ಎಂಡೋಸ್ಕೊಪಿ ಮಾಡಿದ್ದರು.

ಈ ವೇಳೆ ವ್ಯಕ್ತಿ ಹೊಟ್ಟೆಯಲ್ಲಿ ಉಗುರಿರುವ ಸಂಗತಿ ಗೊತ್ತಾಗಿದೆ. ನಂತ್ರ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಹೊಟ್ಟೆಯಲ್ಲಿದ್ದ ಒಂದೊಂದೇ ಉಗುರನ್ನು ಹೊರಗೆ ತೆಗೆದಿದ್ದಾರೆ. ಪ್ರತಿಯೊಂದು ಉಗುರು 2 ಇಂಚಿತ್ತು ಎನ್ನಲಾಗಿದೆ. ಸದ್ಯ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...