alex Certify
ಕನ್ನಡ ದುನಿಯಾ       Mobile App
       

Kannada Duniya

ಭಿಕ್ಷೆ ಬೇಡ್ತಿದ್ದಾರೆ ನಿವೃತ್ತ ಶಿಕ್ಷಕಿ : ಫೇಸ್ಬುಕ್ ನಲ್ಲಿ ಗುರುತು ಹಿಡಿದ ವಿದ್ಯಾರ್ಥಿಗಳು

ನವೆಂಬರ್ 5ರಂದು ಸರ್ಕಾರಿ ಉದ್ಯೋಗಿ ವಿದ್ಯಾ ಎಂ.ಆರ್. ಕೇರಳದ ತಂಪನೂರ್ ರೈಲ್ವೆ ನಿಲ್ದಾಣದಲ್ಲಿ ಸ್ನೇಹಿತೆಗಾಗಿ ಕಾದು ಕುಳಿತಿದ್ದರು. ಈ ವೇಳೆ ಅವರ ಕಣ್ಣು ಪಾಲಿಥಿನ್ ಬ್ಯಾಗ್ ಹಿಡಿದು ಕುಳಿತಿದ್ದ ವೃದ್ಧ ಮಹಿಳೆ ಮೇಲೆ ಹೋಗಿದೆ. ಕುತೂಹಲಕ್ಕೆ ವೃದ್ಧೆಯನ್ನು ಹಿಂಬಾಲಿಸಿದ ವಿದ್ಯಾರಿಗೆ ಆಶ್ಚರ್ಯಕರ ವಿಷ್ಯ ಗೊತ್ತಾಗಿದೆ.

ಮಹಿಳೆ ಅಕ್ಕಪಕ್ಕದಲ್ಲಿದ್ದ ಹಣ್ಣುಗಳನ್ನು ಕಿತ್ತು ತಿನ್ನುತ್ತ ಹೋಗಿದ್ದಾರೆ. ಮಹಿಳೆಯನ್ನು ಮಾತನಾಡಿಸಿದ ವಿದ್ಯಾ ಹಸಿವಾಗ್ತಿದೆಯಾ ಎಂದು ಕೇಳಿದ್ದಾರೆ. ವೃದ್ದೆ ಇಲ್ಲವೆಂದ್ರೂ ವಿದ್ಯಾ ಕೊಟ್ಟ ಇಡ್ಲಿಯನ್ನು ಗಬಗಬ ತಿಂದಿದ್ದಾರೆ. ಮಾತು ಮುಂದುವರೆಸಿದ ವಿದ್ಯಾ ಮಹಿಳೆ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ತೋರಿದ್ದಾರೆ.

ಆರಂಭದಲ್ಲಿ ವೃದ್ಧ ಮಹಿಳೆ ಒಳ್ಳೆ ಶಿಕ್ಷಣ ಪಡೆದಿದ್ದಾಳೆಂಬುದು ಗೊತ್ತಾಗಿದೆ. ಆದ್ರೆ ಮಾತಿನ ಮಧ್ಯೆ ಮಹಿಳೆ ನಿವೃತ್ತ ಶಿಕ್ಷಕಿ ಎಂಬ ಸಂಗತಿ ವಿದ್ಯಾರಿಗೆ ಶಾಕ್ ನೀಡಿದೆ. ವಿದ್ಯಾ ತಕ್ಷಣ ಶಿಕ್ಷಕಿ ಫೋಟೋ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಕೆಲವೇ ಕ್ಷಣಗಳಲ್ಲಿ ಶಿಕ್ಷಕಿ ಗುರುತು ಹಿಡಿದ ವಿದ್ಯಾರ್ಥಿಗಳು ಅವರ ಹೆಸರು ಹೇಳಿದ್ದಾರೆ.

ಮಲಾಪುರಮ್ ಶಾಲೆಯಲ್ಲಿ ಗಣಿತ ಕಲಿಸುತ್ತಿದ್ದ ವಾಲ್ಸಾ ಶಿಕ್ಷಕಿ ಈಗ ಭಿಕ್ಷೆ ಬೇಡ್ತಿದ್ದಾರೆಂಬುದು ಗೊತ್ತಾಗ್ತಿದ್ದಂತೆ  ವಿದ್ಯಾರ್ಥಿಗಳು ಶಿಕ್ಷಕಿ ನೆರವಿಗೆ ಧಾವಿಸಿದ್ದಾರೆ. ಆದ್ರೆ ವಿದ್ಯಾರ್ಥಿಗಳ ನೆರವನ್ನು ಶಿಕ್ಷಕಿ ತಿರಸ್ಕರಿಸಿದ್ದಾರೆ. ತಂದೆ ಅಥವಾ ಮಗನ ಜೊತೆ ಮಾತ್ರ ಹೋಗುವುದಾಗಿ ಹೇಳಿದ್ದಾರೆ. ಪೊಲೀಸರಿಗೆ ವಿಷ್ಯ ಗೊತ್ತಾಗಿದೆ. ಗಂಡ ಹಾಗೂ ಮಗ ಶಿಕ್ಷಕಿಯನ್ನು ಬಿಟ್ಟು ಹೋಗಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ.

ಶಿಕ್ಷಕಿ ಸಹೋದರಿ ಮೂಲಕ ಗಂಡ ಹಾಗೂ ಮಗನ ಹುಡುಕಾಟ ಶುರುಮಾಡಿದ್ದಾರೆ ಪೊಲೀಸರು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...