alex Certify
ಕನ್ನಡ ದುನಿಯಾ       Mobile App
       

Kannada Duniya

ಹಳೆ ನೋಟು ಜಮಾವಣೆಯಲ್ಲಿ ಬದಲಾಯ್ತು ನಿಯಮ

legal-500-and-tenders-1000-notes-cease_8ca6606c-a5db-11e6-9005-31625660f15f-580x395

ಹಳೆ 500 ಹಾಗೂ ಸಾವಿರ ಮುಖಬೆಲೆಯ ನೋಟುಗಳನ್ನು ಇನ್ನೂ ಬ್ಯಾಂಕ್ ಗೆ ಜಮಾ ಮಾಡದೆ ಕುಳಿತವರಿಗೊಂದು ಶಾಕಿಂಗ್ ನ್ಯೂಸ್. ಹಳೆ 500 ಹಾಗೂ ಸಾವಿರ ಮುಖ ಬೆಲೆಯ ನೋಟುಗಳ ಜಮಾ ವಿಚಾರಕ್ಕೆ ಸಂಬಂಧಿಸಿದಂತೆ ಆರ್ ಬಿ ಐ ಮಹತ್ವದ ಆದೇಶವನ್ನು ಹೊರಡಿಸಿದೆ.

ಡಿಸೆಂಬರ್ 30 ರ ಒಳಗೆ  ಅಕೌಂಟ್ ಖಾತೆದಾರ 5 ಸಾವಿರ ರೂಪಾಯಿಗಿಂತ ಹೆಚ್ಚು ಮೌಲ್ಯದ ಹಳೆ ನೋಟನ್ನು ಒಂದು ಬಾರಿ ಮಾತ್ರ ತನ್ನ ಖಾತೆಗೆ ಜಮಾ ಮಾಡಬಹುದಾಗಿದೆ. ಪದೇ ಪದೇ ಹಳೆ ನೋಟುಗಳ ಜಮಾ ಮಾಡಲು ಸಾಧ್ಯವಿಲ್ಲ. 5 ಸಾವಿರಕ್ಕಿಂತ ಹೆಚ್ಚು ಹಳೆ ನೋಟುಳ್ಳವರು ತಮ್ಮ ಖಾತೆಗೆ ಒಮ್ಮೆ ಮಾತ್ರ ಜಮಾ ಮಾಡಬಹುದಾಗಿದೆ. ಆದ್ರೆ 5 ಸಾವಿರಕ್ಕಿಂತ ಕಡಿಮೆ ಹಣಕ್ಕೆ ಈ ಮಿತಿ ಅನ್ವಯವಾಗುವುದಿಲ್ಲ.

ಕಪ್ಪುಹಣವನ್ನು ಬಿಳಿಯದಾಗಿ ಮಾಡಲು ಬ್ಯಾಂಕ್ ಖಾತೆಗಳನ್ನು ಬಳಸಿಕೊಳ್ಳಲಾಗ್ತಾ ಇದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಇಂದು ಸಂಜೆ 5 ಸಾವಿರಕ್ಕಿಂತ ಹೆಚ್ಚು ಹಣವನ್ನು ಖಾತೆಗೆ ಜಮಾ ಮಾಡುವವರು ಯಾವೆಲ್ಲ ನಿಯಮಗಳನ್ನು ಪಾಲಿಸಬೇಕೆನ್ನುವ ಬಗ್ಗೆ ಸಂಪೂರ್ಣ ವಿವರ ನೀಡಲಿದೆ. ಆದ್ರೆ ಕಪ್ಪುಹಣವುಳ್ಳವರಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಅವರು ನೇರವಾಗಿ ತಪ್ಪೊಪ್ಪಿಕೊಂಡು ಹಣವನ್ನು ಬ್ಯಾಂಕ್ ಗೆ ಕಟ್ಟಿ ತೆರಿಗೆ ಹಾಗೂ ದಂಡ ನೀಡಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...