alex Certify
ಕನ್ನಡ ದುನಿಯಾ       Mobile App
       

Kannada Duniya

ವಾಹನ ಸವಾರರಿಗೆ ಇಲ್ಲಿದೆ ಖುಷಿ ಸುದ್ದಿ

mukesh_amban

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಪದೇ ಪದೇ ಹೆಚ್ಚಾಗುತ್ತಿದೆ ಎಂದು ವಾಹನ ಸವಾರರು ಹೇಳುವುದನ್ನು ಕೇಳಿರುತ್ತೀರಿ. ಇತ್ತೀಚೆಗೆ ತೈಲ ಬೆಲೆ ಕಡಿಮೆಯಾಗುತ್ತಿದೆಯಾದರೂ ಅದು ಪೈಸೆಗಳ ಲೆಕ್ಕದಲ್ಲಿ ಮಾತ್ರ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾದರೂ ಅದರ ಹೆಚ್ಚಿನ ಲಾಭ ದೇಶೀಯ ಗ್ರಾಹಕರಿಗೆ ಸಿಗುತ್ತಿಲ್ಲ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತೈಲ ಬೆಲೆ ಆಧರಿಸಿ ದೇಶೀಯ ಮಾರುಕಟ್ಟೆಯಲ್ಲಿ ತೈಲ ಕಂಪನಿಗಳು ಆಗಾಗ ಬೆಲೆ ನಿರ್ಧರಿಸುತ್ತವೆ. ಇತ್ತೀಚಿನ ಬೆಳವಣಿಗೆಗಳ ಪ್ರಕಾರ ಮಿನರಲ್ ವಾಟರ್ ಗಿಂತಲೂ ಕಡಿಮೆ ಬೆಲೆಗೆ ತೈಲ ಬೆಲೆ ಇಳಿಕೆಯಾದರೂ ದೇಶೀಯ ಮಾರುಕಟ್ಟೆಯಲ್ಲಿ ಮಾತ್ರ ಪೈಸೆಗಳ ಲೆಕ್ಕದಲ್ಲಿ ಕಡಿಮೆ ಮಾಡಲಾಗಿದೆ. ಇದೆಲ್ಲಾ ಇರಲಿ, ಇನ್ನೂ 3-5 ವರ್ಷಗಳ ಕಾಲ ತೈಲ ಬೆಲೆ ಇದೇ ರೀತಿ ಮುಂದುವರೆಯಲಿದೆ. ಮೂರ್ನಾಲ್ಕು ವರ್ಷ ಕಾಲ ಬೆಲೆ ಕಡಿಮೆಯಾಗಿಯೇ ಇರುತ್ತದೆ ಎಂದು ಹೇಳಲಾಗಿದೆ.

ವಿಶ್ವದ ಬೃಹತ್ ತೈಲಶೋಧಕ ಘಟಕದ ಮಾಲೀಕರಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರು ಸಂದರ್ಶನವೊಂದರಲ್ಲಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿಯೇ ತೈಲ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹಿಂದೆಯೂ ಇಳಿಕೆಯಾಗಿತ್ತಾದರೂ ಹಂತಹಂತವಾಗಿ ಬೆಲೆ ಏರಿಕೆಯಾಗಿತ್ತು. ಈಗ ಬೆಲೆ ಇಳಿಕೆಯಾಗಿದ್ದು, ಕೆಲ ವರ್ಷ ಇದೇ ರೀತಿ ಮುಂದುವರೆಯಲಿದೆ. ಅಗತ್ಯಕ್ಕಿಂತ ಹೆಚ್ಚಿನ ಉತ್ಪಾದನೆ ಮತ್ತು ಪೂರೈಕೆ ಇರುವುದರಿಂದ ಬೆಲೆ ಕಡಿಮೆಯಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಂದರೆ, ಬೇಡಿಕೆಗಿಂತ ಪೂರೈಕೆಯೇ ಜಾಸ್ತಿಯಾಗಿರುವುದು ಬೆಲೆ ಕಡಿಮೆಯಾಗಲು ಕಾರಣ. ಭಾರತದಂತಹ ದೇಶಗಳಿಗೆ ಇದು ಅನುಕೂಲವಾಗಲಿದೆ. ಕೆಲ ಕಾರಣಗಳಿಂದ ತೈಲ ಬೆಲೆ ಇದೇ ರೀತಿ ಮುಂದುವರೆಯಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...