alex Certify
ಕನ್ನಡ ದುನಿಯಾ       Mobile App
       

Kannada Duniya

ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಕೇರಳದ ಭಿಕ್ಷುಕರು ಪದವೀಧರರು

begger

ಕಳೆದ ವಾರದವರೆಗೂ ದಾಸ್ ಕೇರಳದ ಕಕ್ಕನಾಡ್ ನಲ್ಲಿರೋ ಆಶ್ರಯ ಮನೆಯಲ್ಲಿ ವಾಸವಾಗಿದ್ದ. ರಸ್ತೆಯಲ್ಲಿ ನಡೆದ ಘರ್ಷಣೆ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಪೊಲೀಸರು ಅವನನ್ನು ಎಳೆದು ತಂದಿದ್ರು. ಅವನ ಇಂಟ್ರೆಸ್ಟಿಂಗ್ ಕಹಾನಿ ಆಗ ಬಯಲಾಗಿದೆ. ದಾಸ್ ಉತ್ತರ ಭಾರತ ಮೂಲದವನು. ಈತ ಸ್ನಾತಕೋತ್ತರ ಪದವೀಧರ.

ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ನಿರರ್ಗಳವಾಗಿ ಮಾತನಾಡ್ತಾನೆ. ಫೋಟೋಗ್ರಫಿ ಬಗ್ಗೆ ಅತಿಯಾದ ಆಸಕ್ತಿಯಿದೆ. ಆದ್ರೆ ಭಿಕ್ಷೆ ಬೇಡಿ ಬದುಕು ಸಾಗಿಸುತ್ತಿದ್ದಾನೆ. ಸುಶಿಕ್ಷಿತ ಭಿಕ್ಷುಕರ ಕ್ಲಬ್ ನಲ್ಲಿರುವವನು ದಾಸ್ ಮಾತ್ರವಲ್ಲ. ರಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾದಲ್ಲಿ ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ ಕೇರಳ ರಾಜ್ಯದಲ್ಲಿರುವ ಶೇ.41.3ರಷ್ಟು ಭಿಕ್ಷುಕರು ಸುಶಿಕ್ಷಿತರು, ಕೇರಳದಲ್ಲಿ 3715 ಭಿಕ್ಷುಕರಿದ್ದು, ಅವರಲ್ಲಿ 1533 ಮಂದಿ ಒಳ್ಳೆ ಶಿಕ್ಷಣ ಪಡೆದಿದ್ದಾರೆ.

1115 ಮಂದಿ ಸುಶಿಕ್ಷಿತರು ಆದ್ರೆ  10ನೇ ಕ್ಲಾಸ್ ಪಾಸ್ ಮಾಡಿಲ್ಲ. 198 ಮಂದಿ ಪದವಿ ಪೂರ್ಣಗೊಳಿಸಿಲ್ಲ, 24 ಪದವೀಧರ ಭಿಕ್ಷುಕರಿದ್ದಾರೆ. ಅವರಲ್ಲಿ ಐವರು ತಾಂತ್ರಿಕ ಪದವಿ ಪಡೆದಿದ್ದು, ಆ ಪೈಕಿ ಒಬ್ಬಳು ಮಹಿಳೆಯಿದ್ದಾಳೆ. ಭಿಕ್ಷುಕರು ದಿನಕ್ಕೆ 200 ರಿಂದ 2000 ರೂಪಾಯಿ ಕಲೆಕ್ಷನ್ ಮಾಡ್ತಾರೆ. ಚೆನ್ನಾಗಿ ಓದಿಕೊಂಡಿದ್ರೂ ಕೆಲಸ ಸಿಗದೇ ಇದ್ದಿದ್ರಿಂದ ಭಿಕ್ಷೆ ಬೇಡಿಕೊಂಡು ಆರಾಮಾಗಿ ಜೀವನ ನಡೆಸ್ತಿದ್ದಾರೆ. ಅವರನ್ನೆಲ್ಲ ಮುಖ್ಯವಾಹಿನಿಗೆ ಕರೆತರಲು ಸಾಮಾಜಿಕ ಕಾರ್ಯಕರ್ತರು ಪ್ರಯುತ್ನ ನಡೆಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...