alex Certify
ಕನ್ನಡ ದುನಿಯಾ       Mobile App
       

Kannada Duniya

ನಟ ಅಕ್ಷಯ್ ಕುಮಾರ್ ಪುತ್ರನ ಕಿವಿ ಹಿಂಡಿದ ಪ್ರಧಾನಿ

457888-untitled-12

ಪ್ರಧಾನಿ ನರೇಂದ್ರ ಮೋದಿಯವರು ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಪುತ್ರ ಆರವ್ ಕುಮಾರನ ಕಿವಿ ಹಿಂಡಿದ್ದಾರೆ. ಕಿವಿ ಹಿಂಡಿಸಿಕೊಳ್ಳುವಂತಹ ತಪ್ಪೇನು ಮಾಡಿದ್ದ ಅಕ್ಷಯ್ ಕುಮಾರ್ ಪುತ್ರ ಅಂತೀರಾ..? ಮುಂದೆ ಓದಿ.

ಹೌದು. ಪ್ರಧಾನಿ ನರೇಂದ್ರ ಮೋದಿಯವರು ಆರವ್ ಕುಮಾರನ ಕಿವಿ ಹಿಂಡಿದ್ದು, ತಪ್ಪು ಮಾಡಿದ್ದಕ್ಕಲ್ಲ. ಬದಲಾಗಿ ‘ಗುಡ್ ಬಾಯ್’ ಎಂದು ಆತನನ್ನು ಪ್ರಶಂಸಿಸಿ ಪ್ರೀತಿಯಿಂದ ಕಿವಿ ಹಿಂಡಿದ್ದಾರೆ. ಸಮಾರಂಭವೊಂದರಲ್ಲಿ ಮೋದಿಯವರು ಪಾಲ್ಗೊಂಡಿದ್ದಾಗ ಆರವ್ ಕುಮಾರನ ಕಿವಿ ಹಿಂಡಿದ್ದಾರೆ.

ತಮ್ಮ ಪುತ್ರನನ್ನು ಪ್ರಧಾನಿ ನರೇಂದ್ರ ಮೋದಿಯವರು ಪ್ರಶಂಸಿಸಿರುವುದಕ್ಕೆ ನಟ ಅಕ್ಷಯ್ ಕುಮಾರ್ ಸಂತಸಗೊಂಡಿದ್ದಾರೆ. ತಡ ಮಾಡದೇ ಈ ಫೋಟೋವನ್ನು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ಅಕ್ಷಯ್ ಕುಮಾರ್, ‘Proud moment in a father’s life, when the Prime Minister pulls your son’s ear in jest & calls him a good boy’ ಎಂದು ಬರೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...