alex Certify
ಕನ್ನಡ ದುನಿಯಾ       Mobile App
       

Kannada Duniya

ಕಿರುಕುಳದ ಕುರಿತು ಫೇಸ್ ಬುಕ್ ನಲ್ಲಿ ಬರೆದುಕೊಂಡ ಮಹಿಳಾ ಐಪಿಎಸ್ ಅಧಿಕಾರಿ

face 12546

ಹೆಣ್ಣುಮಕ್ಕಳು ಕೆಳಹಂತದ ಕೆಲಸದಲ್ಲಿರಲಿ, ಉನ್ನತ ಹಂತದ ಹುದ್ದೆಯಲ್ಲಿರಲಿ, ಕೆಲವೊಮ್ಮೆ ಕಿರುಕುಳ, ದೌರ್ಜನ್ಯ ಎದುರಿಸಬೇಕಾಗುತ್ತದೆ. ಹೆಣ್ಣುಮಕ್ಕಳ ಮೇಲೆ ಸಹೋದ್ಯೋಗಿಗಳು, ಪರಿಚಯಸ್ಥರಿಂದಲೇ ಹೆಚ್ಚಾಗಿ ದೌರ್ಜನ್ಯ ನಡೆಯುತ್ತವೆ. ಹೀಗೆ ಸಹೋದ್ಯೋಗಿಯಿಂದಲೇ ಮಹಿಳಾ ಅಧಿಕಾರಿಯೊಬ್ಬರು ಕಿರುಕುಳಕ್ಕೆ ತುತ್ತಾದ ಘಟನೆ ಇಲ್ಲಿದೆ ನೋಡಿ.

ಕೇರಳದ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರಿಗೆ ಸಾರಿಗೆ ಇಲಾಖೆಯ ಉನ್ನತ ಹುದ್ದೆಯ ಅಧಿಕಾರಿಯೊಬ್ಬರು ಕಿರುಕುಳ ನೀಡಿದ್ದಾರೆ. ಕಳೆದ 29 ವರ್ಷಗಳಿಂದ ತಮಗೆ ಕಿರುಕುಳ ನೀಡಲಾಗುತ್ತಿದೆ ಎಂದು ಅವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ತಾವು ಐಪಿಎಸ್ ತರಬೇತಿ ಪಡೆಯುವಾಗಿನಿಂದಲೂ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿ ತೋಮಿನ್ ಅವರು ತಮಗೆ ಕಿರುಕುಳ ನೀಡುತ್ತಿರುವುದಾಗಿ ಮಹಿಳಾ ಐಪಿಎಸ್ ಅಧಿಕಾರಿ ಶ್ರೀಲೇಖಾ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹೇಳಿದ್ದಾರೆ.

ಶ್ರೀಲೇಖಾ ಅವರು ಕಳೆದ 29 ವರ್ಷಗಳಿಂದ ಕಿರುಕುಳ ಅನುಭವಿಸಿರುವುದನ್ನು ಪೋಸ್ಟ್ ಮಾಡಿದ್ದು, ಕೇರಳದಲ್ಲಿ ವ್ಯಾಪಕ ಚರ್ಚೆಗೆ ಒಳಗಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶ್ರೀಲೇಖಾ ಅವರು, ತಾವು ಈ ವಿಷಯದ ಕುರಿತಂತೆ ಡಿಜಿಪಿಯವರಿಗೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...