alex Certify
ಕನ್ನಡ ದುನಿಯಾ       Mobile App
       

Kannada Duniya

ಭೀಕರ ಅಪಘಾತದಲ್ಲಿ ನವ ವಿವಾಹಿತ ಅಧಿಕಾರಿ ಸಾವು

ನವದೆಹಲಿ: ಉತ್ತರ ಪ್ರದೇಶದ ಆಗ್ರಾ –ಲಖ್ನೋ ಎಕ್ಸ್ ಪ್ರೆಸ್ ವೇ ನಲ್ಲಿ ನಡೆದ ಭೀಕರ ಅಪಘಾತದಲ್ಲಿ ಐ.ಐ.ಎಸ್.(ಇಂಡಿಯನ್ ಇನ್ ಫಾರ್ಮೇಷನ್ ಸರ್ವೀಸ್ IIS) ಅಧಿಕಾರಿ ಮೃತಪಟ್ಟಿದ್ದಾರೆ.

2015 ರ ಬ್ಯಾಚ್ ಅಧಿಕಾರಿ ದೀಪಕ್ ಸಕ್ಸೇನಾ ಮೃತಪಟ್ಟವರು. ತಮ್ಮ ತಾಯಿ, ಪತ್ನಿಯೊಂದಿಗೆ ಇಟವಾ ಜಿಲ್ಲೆಯಲ್ಲಿ ಅವರು ಕಾರಿನಲ್ಲಿ ತೆರಳುವಾಗ, ಟೈಯರ್ ಸ್ಪೋಟಗೊಂಡು ಕಾರು ಪಲ್ಟಿಯಾಗಿದೆ.

ಇದರಿಂದಾಗಿ ದೀಪಕ್ ಸ್ಥಳದಲ್ಲೇ ಸಾವು ಕಂಡಿದ್ದು, ಗಂಭೀರವಾಗಿ ಗಾಯಗೊಂಡಿರುವ ಅವರ ತಾಯಿ, ಪತ್ನಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ದೀಪಕ್ ಡಿಸೆಂಬರ್ 12 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 5 ವರ್ಷಗಳಿಂದ ಪ್ರೀತಿಸಿದ್ದ ಸಾಕ್ಷಿ ಅವರನ್ನು ದೀಪಕ್ ಮದುವೆಯಾಗಿದ್ದು, ಈ ಅಪಘಾತದಿಂದಾಗಿ ಎರಡೂ ಕುಟುಂಬದವರಿಗೆ ಆಘಾತವಾಗಿದೆ.

ದೀಪಕ್ ನಿಧನಕ್ಕೆ ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ರಾಜವರ್ಧನ್ ರಾಥೋಡ್ ಸಂತಾಪ ಸೂಚಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...