alex Certify
ಕನ್ನಡ ದುನಿಯಾ       Mobile App
       

Kannada Duniya

20 ಸಾವಿರ ಕೇಸ್ ಗಳ ಪೈಕಿ ಕೇವಲ 15 ರಲ್ಲಿ ಪೊಲೀಸರಿಗೆ ಶಿಕ್ಷೆ

mh police

ಮಹಾರಾಷ್ಟ್ರದಲ್ಲಿ ಪೊಲೀಸರ ವಿರುದ್ಧ ಬರೋಬ್ಬರಿ 20 ಸಾವಿರ ಪ್ರಕರಣಗಳು ದಾಖಲಾಗಿದ್ದರೂ, ಕೇವಲ 15 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. ಪೊಲೀಸರ ವಿರುದ್ಧವೇ ಪ್ರಕರಣಗಳು ದಾಖಲಾಗುವುದರಿಂದ ಸರಿಯಾದ ರೀತಿಯಲ್ಲಿ ನಿರ್ವಹಿಸಿಲ್ಲ ಎಂಬ ಆರೋಪ ಕೇಳಿಬಂದಿವೆ.

2012ರಿಂದ 2014ರ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 20,733 ಪ್ರಕರಣಗಳು ಪೊಲೀಸರ ವಿರುದ್ಧ ದಾಖಲಾಗಿವೆ ಎಂದು ರಾಜ್ಯ ಅಪರಾಧ ಬ್ಯೂರೋ ಮತ್ತು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ಮಾಹಿತಿ ನೀಡಿವೆ. ಅದರಂತೆ, ಈ 3 ವರ್ಷಗಳಲ್ಲಿ ಪೊಲೀಸರ ವಿರುದ್ಧ ದಾಖಲಾದ 20, 733 ಕೇಸ್ ಗಳಲ್ಲಿ ಕೇವಲ 15 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. ಇಲಾಖಾ ತನಿಖೆ, ಸಸ್ಪೆಂಡ್ ವಾಪಸ್, ಒತ್ತಡ, ಸಾಕ್ಷ್ಯ ಕೊರತೆ ಹಾಗೂ ರಾಜೀ ಸಂಧಾನ ಇವೇ ಮೊದಲಾದ ಕಾರಣಗಳಿಂದ ಪ್ರಕರಣಗಳು ಮುಚ್ಚಿ ಹೋಗುತ್ತವೆ ಎನ್ನಲಾಗಿದೆ.

ಮುಂಬೈನಲ್ಲಿ 2902 ಪೊಲೀಸರ ವಿರುದ್ಧ ದಾಖಲಾಗಿದ್ದು, ಅವುಗಳಲ್ಲಿ 2440 ದೂರುಗಳನ್ನು ಸುಳ್ಳು ದೂರುಗಳೆಂದು ತಳ್ಳಿಹಾಕಲಾಗಿದೆ. ಇಲಾಖೆಯ ಆಂತರಿಕ ತನಿಖೆಯಲ್ಲಿ ಹೀಗೆ ಹೇಳಿ ಕೈ ತೊಳೆದುಕೊಳ್ಳಲಾಗಿದೆ. ದಾಖಲಾದ ಪ್ರಕರಣಗಳಿಗೆ ಹೋಲಿಸಿದಾಗ, ಪೊಲೀಸರಿಗೆ ಕೇವಲ ಬೆರಳೆಣಿಕೆ ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...