alex Certify
ಕನ್ನಡ ದುನಿಯಾ       Mobile App
       

Kannada Duniya

ಈತನ ಡಾನ್ಸ್ ವೈಖರಿಗೆ ನೀವೂ ಆಗ್ತೀರಿ ಫಿದಾ…!

ಮುಖಗಂಟಿಕ್ಕಿಕೊಂಡು ಸಂಚಾರ ನಿಯಂತ್ರಣ ಮಾಡುವ ಪೊಲೀಸರೇ ದೇಶದಲ್ಲಿ ತುಂಬಿರುವಾಗ, ಒಡಿಸ್ಸಾದಲ್ಲಿ ಒಬ್ಬ ಪೇದೆ ಡ್ಯಾನ್ಸ್ ಮೂಲಕವೇ ಟ್ರಾಫಿಕ್ ಕಂಟ್ರೋಲ್ ಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.

ಒಡಿಸ್ಸಾದ ಭುವನೇಶ್ವರ್ ನಗರದಲ್ಲಿ ಹೋಂ ಗಾರ್ಡ್ ಆಗಿರುವ 33 ವರ್ಷದ ಪ್ರತಾಪ್ ಚಂದ್ರ ಖಾಂಡ್ವಾಲ್ ಇದೀಗ ಸಾಮಾಜಿಕ ಜಾಲತಾಣದ ಕೇಂದ್ರ ಬಿಂದು. ಸದ್ಯ ಸಂಚಾರಿ ನಿಯಂತ್ರಣದ ಕಾರ್ಯದಲ್ಲಿ ನಿರತನಾಗಿದ್ದಾರೆ. ಈತ ಸಂಚಾರಿ ನಿಯಂತ್ರಣಕ್ಕೆಂದು ಬಳಸುವ ವಿಶಿಷ್ಠ ಚಲನವಲನದ ವಿಡಿಯೋ ಇದೀಗ ವೈರಲ್ ಆಗಿದೆ.

ಡಾನ್ಸ್‌ ಮೂಲಕ ಸಂಚಾರ ನಿಯಂತ್ರಿಸುವ ಈತನ ಪ್ರಕಾರ, ಆರಂಭದಲ್ಲಿ ಡಾನ್ಸ್‌ ಮೂಲಕ ನೀಡುತ್ತಿದ್ದ ಸಂದೇಶವನ್ನು ಅನೇಕ ಸವಾರರು ಸ್ವೀಕರಿಸುತ್ತಿರಲಿಲ್ಲ. ಆದರೆ ಈ ವಿಶಿಷ್ಠ ನಡೆಯನ್ನು ಸಮಯ ಕಳೆದಂತೆ ಜನ ಒಪ್ಪಿಕೊಂಡಿದ್ದು, ಎಲ್ಲರೂ ನಾನು ನೀಡುವ ಸೂಚನೆಯನ್ನು ಪಾಲಿಸುತ್ತಿದ್ದಾರೆ ಎಂದಿದ್ದಾನೆ.

ಡಾನ್ಸ್‌ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಜಾಲತಾಣದಲ್ಲಿ ಈತನಿಗೆ ಭಾರಿ ಫಾಲೋವರ್ಸ್ ಸೃಷ್ಠಿಯಾಗಿದ್ದು, ಫೇಸ್‌ಬುಕ್‌ನಲ್ಲಿ ಮಾತ್ರವೇ ಸುಮಾರು 50 ಸಾವಿರ ಜನ ಈತನ ಟ್ವಿಟ್ಟರ್ ಖಾತೆಯನ್ನು ಫಾಲೋ ಮಾಡುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...