alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ನಲ್ಲಿ ಸೆಂಡ್ ಆಯ್ತು ಸೆಕ್ಸ್ ವಿಡಿಯೋ

ಜಯಪೋರ್: ಒಡಿಶಾದಲ್ಲಿ ಇತ್ತೀಚೆಗೆ ಅಶ್ಲೀಲ ವಿಡಿಯೋ ಬಹಿರಂಗವಾಗಿ ಭಾರೀ ಸದ್ದು ಮಾಡುತ್ತಿದೆ. ಅಂತಹುದೇ ಮತ್ತೊಂದು ಘಟನೆ ನಡೆದಿದ್ದು, ಇಂದು ಬೆಳಿಗ್ಗೆ ದೂರು ದಾಖಲಾಗಿದೆ.

ತನ್ನ ಪ್ರಿಯತಮೆಯೊಂದಿಗೆ(ಈಗಾಗಲೇ ಬೇರೆಯವರನ್ನು ಮದುವೆಯಾಗಿರುವ ಯುವತಿ) ಖಾಸಗಿಯಾಗಿ ಕಳೆದ ಕ್ಷಣಗಳ ವಿಡಿಯೋವನ್ನು ಯುವಕನೊಬ್ಬ ಆಕೆಯ ಪತಿಗೆ ವಾಟ್ಸಾಪ್ ನಲ್ಲಿ ಕಳಿಸಿದ್ದಾನೆ. ಅಂದ ಹಾಗೇ ಯುವಕ ಹಾಗೂ ಯುವತಿ ಮೊದಲೇ ಪ್ರೀತಿಸಿದ್ದರಾದರೂ, ಆಕೆ ಬೇರೊಬ್ಬನೊಂದಿಗೆ ಮದುವೆಯಾಗಿದ್ದಾಳೆ. ಆಕೆ ಬೇರೆಯವನನ್ನು ಮದುವೆಯಾಗಿದ್ದಕ್ಕೆ ಸಿಟ್ಟಾದ ಯುವಕ ಹೀಗೆ ಮಾಡಿದ್ದಾನೆ.

ಒಡಿಶಾದ ಕೊರಾಪುಟ್ ಜಿಲ್ಲೆಯ ಜಯಪೋರ್ ಪ್ರದೇಶದಲ್ಲಿ ಈ ಪ್ರಕರಣ ನಡೆದಿದೆ. ಮಾಜಿ ಪ್ರಿಯತಮೆಯಿಂದ ಆಕೆಯ ಪತಿಯ ಫೋನ್ ನಂಬರ್ ಪಡೆದುಕೊಂಡಿದ್ದ ಯುವಕ, 36 ಲೈಂಗಿಕ ವಿಡಿಯೋಗಳನ್ನು ವಾಟ್ಸಾಪ್ ನಲ್ಲಿ ಸೆಂಡ್ ಮಾಡಿದ್ದಾನೆ.

ತನ್ನ ಪತ್ನಿ ಯುವಕನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ವಿಡಿಯೋ ಕಂಡು ಕಂಗಾಲಾದ ಪತಿರಾಯ ಪೊಲೀಸರಿಗೆ ದೂರು ನೀಡಿದ್ದಾನೆ. ಇದೆಲ್ಲವನ್ನು ಕಂಡ ಮೇಲೆ ಪತ್ನಿಯೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...