alex Certify
ಕನ್ನಡ ದುನಿಯಾ       Mobile App
       

Kannada Duniya

‘ಅಮಿತ್ ಶಾ’ ಗೆ ಆತಿಥ್ಯ ನೀಡಿದ್ದ ವ್ಯಕ್ತಿ ‘ಬಿಜೆಡಿ’ ಗೆ…!

ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಆತಿಥ್ಯ ನೀಡಿದ್ದ ವ್ಯಕ್ತಿ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರ ಬಳಿಕ ಈಗ ಮತ್ತೊಂದು ಅಂತಹುದೇ ಘಟನೆ ನಡೆದಿದೆ.

ಅಮಿತ್ ಶಾ ಅವರ ಒಡಿಶಾ ಪ್ರವಾಸದ ಸಂದರ್ಭದಲ್ಲಿನ ಗ್ರಾಮ ವಾಸ್ತವ್ಯದ ವೇಳೆ ಅವರಿಗೆ ಆತಿಥ್ಯ ನೀಡಿದ್ದ ಗಂಜಾಂ ಜಿಲ್ಲೆಯ ಬಡ ರೈತ, ಈಗ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾದಳ ಸೇರ್ಪಡೆಗೊಂಡಿದ್ದಾರೆ.

ತಮ್ಮ ಬಿಜೆಡಿ ಸೇರ್ಪಡೆ ಕುರಿತು ಪ್ರತಿಕ್ರಿಯೆ ನೀಡಿರುವ ನಬೀನ್ ಎಂಬ ಈ ರೈತ, ಅಮಿತ್ ಶಾ ತಮ್ಮ ಮನೆಗೆ ಭೇಟಿ ನೀಡಿದ ವೇಳೆ ನೀಡಿದ ಆಶ್ವಾಸನೆಗಳನ್ನು ಈಡೇರಿಸಲಿಲ್ಲ. ಈ ಹಿನ್ನಲೆಯಲ್ಲಿ ಬಿಜು ಜನತಾದಳ ಸೇರ್ಪಡೆಗೊಂಡಿದ್ದೇನೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...