alex Certify
ಕನ್ನಡ ದುನಿಯಾ       Mobile App
       

Kannada Duniya

ಆ ವೈದ್ಯರನ್ನು ಬೀಳ್ಕೊಡುವಾಗ ಕಣ್ಣೀರಿಟ್ಟಿದ್ದಾರೆ ಜನ…!

ಒಡಿಶಾದಲ್ಲೊಂದು ಹೃದಯಸ್ಪರ್ಶಿ ಘಟನೆ ನಡೆದಿದೆ. ನವರಂಗ್ ಪುರ ಜಿಲ್ಲೆಯ ತೆಂತುಲ್ಕುಂತಿ ಪಟ್ಟಣದ ನಿವಾಸಿಗಳು ವೈದ್ಯರೊಬ್ಬರನ್ನು ಬೀಳ್ಕೊಡುವಾಗ ಕಣ್ಣೀರಿಟ್ಟಿದ್ದಾರೆ. ಅದಕ್ಕೆ ಸೂಕ್ತ ಕಾರಣವೂ ಇದೆ.

ಹೌದು….ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಳೆದ ಎಂಟು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ 32 ವರ್ಷದ ವೈದ್ಯ ಕಿಶೋರ್ ಚಂದ್ರ ದಾಸ್ ಮಾಡಿರುವ ಅಪರೂಪದ ಕಾರ್ಯವೇ ಇದಕ್ಕೆ ಕಾರಣ.

ಬೆಂಗಳೂರಿನ ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಮೆಡಿಕಲ್ ಸೈನ್ಸಸ್ ನಲ್ಲಿ ಪದವಿ ಪಡೆದ ಕಿಶೋರ್ ಚಂದ್ರ ದಾಸ್, ತೆಂತುಲ್ಕುಂತಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾಗಿ ಎಂಟು ವರ್ಷಗಳ ಹಿಂದೆ ನೇಮಕಗೊಂಡಿದ್ದರು.

ಈ ಸಂದರ್ಭದಲ್ಲಿ ಅಲ್ಲಿ ಬಹುತೇಕ ಸೌಲಭ್ಯಗಳ ಕೊರತೆ ಎದುರಾಗಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಕಿಶೋರ್ ಚಂದ್ರ, ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ತರುವ ಮೂಲಕ ಸುಸಜ್ಜಿತ ಆಸ್ಪತ್ರೆಯನ್ನಾಗಿಸಿದರು. ಅಷ್ಟೇ ಅಲ್ಲ, ಐಸಿಯು, ಆಪರೇಷನ್ ಥಿಯೇಟರ್ ಗೆ ಹವಾನಿಯಂತ್ರಿತ ವ್ಯವಸ್ಥೆ ಮಾಡಿಸಿದರು. ತಮ್ಮ ಕೊಠಡಿಗೆ ಹವಾನಿಯಂತ್ರಣ ವ್ಯವಸ್ಥೆ ಅಳವಡಿಸಿಕೊಳ್ಳಲು ಅನುಮತಿ ಇದ್ದರೂ ಅದನ್ನೂ ಸಹ ಅವಶ್ಯಕತೆ ಇದ್ದಲ್ಲಿ  ಅಳವಡಿಸಿದರು.

ಸುಸಜ್ಜಿತ ಆಸ್ಪತ್ರೆಯನ್ನಾಗಿಸಿದ ಕಿಶೋರ್ ಚಂದ್ರ, ರೋಗಿಗಳನ್ನೂ ಸಹ ಕಡೆಗಣಿಸಲಿಲ್ಲ. ಅಶಕ್ತರಿಗೆ ಸ್ವಂತ ಹಣದಿಂದ ಚಿಕಿತ್ಸೆ ನೀಡಿದ್ದಲ್ಲದೆ ಹಲವು ಸಂದರ್ಭಗಳಲ್ಲಿ ರೋಗಿಗಳಿರುವ ಸ್ಥಳಕ್ಕೇ ತೆರಳಿ ಚಿಕಿತ್ಸೆ ನೀಡಿದರು. ಕಿಶೋರ್ ಚಂದ್ರ ತಮ್ಮ ಕರ್ತವ್ಯದ ಅವಧಿಯಲ್ಲಿ ಬಹುತೇಕ ಸಂದರ್ಭಗಳಲ್ಲಿ ಅವಧಿ ಮೀರಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಚಿಕಿತ್ಸೆಗೆ ಮಾರುಹೋಗಿ ಬೇರೆಡೆಯಿಂದಲೂ ರೋಗಿಗಳು ಬರುತ್ತಿದ್ದರೆಂದರೆ ಇವರ ಜನಪ್ರಿಯತೆಯನ್ನು ಊಹಿಸಬಹುದಾಗಿದೆ. 

ಈಗ ಉನ್ನತ ವ್ಯಾಸಂಗಕ್ಕಾಗಿ ಕಿಶೋರ್ ಚಂದ್ರ ಅನಿವಾರ್ಯವಾಗಿ ಆಸ್ಪತ್ರೆ ತೊರೆಯಬೇಕಾಗಿ ಬಂದಿದೆ. ಈ ಸಂದರ್ಭದಲ್ಲಿ ಪಟ್ಟಣದ ನಿವಾಸಿಗಳು ಅಕ್ಷರಶಃ ಕಣ್ಣೀರಿಟ್ಟಿದ್ದಾರೆ. ಅಷ್ಟೇ ಅಲ್ಲ, ಉನ್ನತ ವ್ಯಾಸಂಗದ ಬಳಿಕ ಮರಳಿ ಬರುವಂತೆ ಒತ್ತಾಯಿಸಿದ್ದಾರೆ. ಈ ಭಾವುಕ ಕ್ಷಣಗಳನ್ನು ಕಂಡು ಕಿಶೋರ್ ಚಂದ್ರ ಸಹ ಕಣ್ಣೀರಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...