alex Certify
ಕನ್ನಡ ದುನಿಯಾ       Mobile App
       

Kannada Duniya

ದಿನಗೂಲಿ ನೌಕರನ ಮಗಳು ಈಗ ಐಇಎಸ್ ಆಫೀಸರ್

9935Aparajita-Priyadarshini-Behera

ಕೇಂದ್ರಾಪುರ್ (ಓಡಿಶಾ): ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ, ಸಾಧಿಸುವ ಛಲ ನಮ್ಮಲ್ಲಿದ್ದರೆ ಎಂತಹ ಕೆಲಸವನ್ನಾದರೂ ಮಾಡಿ ಮುಗಿಸಬಹುದು. ಅಲ್ಲದೇ ಹೊಂದಿದ ಗುರಿಯನ್ನು ಸುಲಭವಾಗಿ ತಲುಪಬಹುದು. ಬಹುತೇಕ ಸಾಧಕರು ಬಡತನದಲ್ಲಿ ಅರಳಿದ ಪ್ರತಿಭೆಗಳೇ.

ಎಲ್ಲಾ ಸೌಕರ್ಯಗಳಿದ್ದು ಸಾಧನೆ ಮಾಡಿದವರ ನಡುವೆ ಏನೂ ಇಲ್ಲದೇ ಬಡತನದಿಂದ ಬಂದವರು ಉನ್ನತ ಸಾಧನೆ ಮಾಡುವುದು ದೊಡ್ಡ ಸಂಗತಿ. ಇಲ್ಲಿ ನೋಡಿ ಬಡತನ ಕುಟುಂಬದಿಂದ ಬಂದ ಓಡಿಶಾ ರಾಜ್ಯದ ಕೇಂದ್ರಾಪರ ಜಿಲ್ಲೆಯ ಮಹಾನಂದನ ಗ್ರಾಮದ ಯುವತಿಯ ಯಶೋಗಾಥೆ.

ಈಕೆಯ ಹೆಸರು ಅಪರಾಜಿತ ಪ್ರಿಯದರ್ಶಿನಿ ಬೆಹ್ರಾ. ಈಕೆ ಮಾಡಿದ ಸಾಧನೆ ದೊಡ್ಡದು. ಅಖಿಲ ಭಾರತ ಮಟ್ಟದ ಇಂಡಿಯನ್ ಎಕಾನಾಮಿಕ್ಸ್ ಸರ್ವೀಸ್ (ಐಇಎಸ್) ಪರೀಕ್ಷೆಯಲ್ಲಿ ಪ್ರಿಯದರ್ಶಿನಿ 13 ನೇ ರ್ಯಾಂಕ್ ಗಳಿಸಿದ್ದಾರೆ. ಈಕೆಯ ತಂದೆ ಅಮೂಲ್ಯ ಕುಮಾರ್ ಬೆಹ್ರಾ ದಿನಗೂಲಿ ನೌಕರ. ಅವರು ಮಗಳ ಓದಿಗೆ ಸದಾ ಬೆನ್ನೆಲುಬಾಗಿ ನಿಂತವರು.

ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಸ್ವಗ್ರಾಮ ಮಹಾನಂದನದಲ್ಲಿ ಮುಗಿಸಿದ ಪ್ರಿಯದರ್ಶಿನಿ, ಪಿಯು ಹಾಗೂ ಪದವಿಯನ್ನು ಕೇಂದ್ರಾಪರದ ಮಾರ್ಷಗಯಿ ಕಾಲೇಜ್ ನಲ್ಲಿ ಮುಗಿಸಿ ಉತ್ಕಲ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ಓದಿನಲ್ಲಿ ಸದಾ ಮುಂದಿದ್ದ ಪ್ರಿಯದರ್ಶಿನಿ ಸ್ಕಾಲರ್ ಶಿಪ್ ಪಡೆದಿದ್ದು ಓದಲು ನೆರವಾಯಿತು.

ಅಂದ ಹಾಗೇ ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಪರಾಜಿತ ಪ್ರಿಯದರ್ಶಿನಿ ಬೆಹ್ರಾ, ನಮ್ಮ ತಂದೆಯೇ ನನಗೆ ಪ್ರೇರಣೆ. ಅವರು ದಿನಗೂಲಿ ನೌಕರರಾಗಿದ್ದರೂ ನನ್ನ ಓದಿಗೆ ಸದಾ ಕಾಲ ಬೆನ್ನೆಲುಬಾಗಿದ್ದರು. ನನ್ನ ಈ ಸಾಧನೆಯನ್ನು ಅವರಿಗೆ ಅರ್ಪಿಸುತ್ತೇನೆ ಎಂದು ಹೇಳುತ್ತಾರೆ. ಆಕೆಯ ಸಾಧನೆ ಇನ್ನೊಬ್ಬರಿಗೆ ಪ್ರೇರಣೆಯಾಗಲಿ ಎಂಬುದೇ ಎಲ್ಲರ ಆಶಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...