alex Certify
ಕನ್ನಡ ದುನಿಯಾ       Mobile App
       

Kannada Duniya

ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಮೇಲೆ ಹಲ್ಲೆ

ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂಟರ್ ನ್ಯಾಶನಲ್ ಸ್ಯಾಂಡ್ ಆರ್ಟ್ ಫೆಸ್ಟಿವಲ್ ಗಾಗಿ ಅವರು ಓಡಿಶಾಕ್ಕೆ ಆಗಮಿಸಿದ್ದರು. ಅಪರಿಚಿತ ಯುವಕನೊಬ್ಬ ಅವರ ಕೈಯಲ್ಲಿದ್ದ ವಾಚ್ ಅನ್ನು ಕಿತ್ತುಕೊಳ್ಳಲು ಯತ್ನಿಸಿದ್ದಾನೆ.

ಈ ವೇಳೆ ಸುದರ್ಶನ್ ಅವರ ಕೈಗಳನ್ನು ತಿರುಚಿದ್ದಾನೆ. ಕೈಕುಲುಕುವಂತೆ ನಟಿಸಿ ಈ ಕೃತ್ಯ ಎಸಗಿದ ದುಷ್ಕರ್ಮಿ, ಪಟ್ನಾಯಕ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಅಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಸುದರ್ಶನ್ ಅವರ ಸ್ನೇಹಿತರು ಕೂಡ ಆತನನ್ನು ಹಿಡಿಯಲು ಪ್ರಯತ್ನಿಸಿದ್ರು, ಆದ್ರೆ ಸಾಧ್ಯವಾಗಲಿಲ್ಲ.

ಹಲ್ಲೆಗೊಳಗಾಗಿದ್ದ ಸುದರ್ಶನ್ ಪಟ್ನಾಯಕ್ ರನ್ನು ನಂತರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಓಡಿಶಾದ ಕೋನಾರ್ಕ್ ದೇವಾಲಯದ ಸಮೀಪದಲ್ಲೇ ಸ್ಯಾಂಡ್ ಆರ್ಟ್ ಫೆಸ್ಟಿವಲ್ ನಡೆಯುತ್ತಿದೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮರಳು ಶಿಲ್ಪಿಗಳು ಇದರಲ್ಲಿ ಪಾಲ್ಗೊಂಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...