alex Certify
ಕನ್ನಡ ದುನಿಯಾ       Mobile App
       

Kannada Duniya

16 ದಿನಗಳ ಹಸುಗೂಸನ್ನೇ ಹೊತ್ತೊಯ್ದ ಮಂಗ

ಓಡಿಶಾದ ಕಟಕ್ ಜಿಲ್ಲೆಯಲ್ಲಿ 16 ದಿನಗಳ ಪುಟ್ಟ ಹಸುಗೂಸನ್ನು ಮಂಗವೊಂದು ಹೊತ್ತೊಯ್ದಿದೆ. ತಲಬಸ್ತಾ ಗ್ರಾಮದ ಸಮೀಪ ಇರುವ ಕಾಡಿನಲ್ಲಿ ಈ ಘಟನೆ ನಡೆದಿದೆ. ರಾಮಕೃಷ್ಣ ನಾಯಕ್ ಎಂಬಾತನ ಗಂಡು ಮಗು ಇದು.

ಹೆತ್ತವರ ಬಳಿಯೇ ಮಗು ಮಲಗಿ ನಿದ್ರಿಸುತ್ತಿತ್ತು. ಬೆಳಗ್ಗೆ 6 ಗಂಟೆ ವೇಳೆಗೆ ಮಗುವಿನ ತಾಯಿ ಮುಖ ತೊಳೆಯಲು ಎದ್ದು ಹೋಗಿದ್ದಳು. ತಂದೆ, ಮಗುವಿನ ಪಕ್ಕದಲ್ಲಿಯೇ ಮಲಗಿದ್ದ.

ಅದೇ ಸಮಯಕ್ಕೆ ಮನೆಯೊಳಗೆ ನುಗ್ಗಿದ ಕೋತಿ, ಮಗುವನ್ನು ಹೊತ್ತೊಯ್ದಿದೆ. ಅರಣ್ಯಾಧಿಕಾರಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ಮಗುವಿನ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆದ್ರೆ ಇದುವರೆಗೂ ಮಗು ಪತ್ತೆಯಾಗಿಲ್ಲ.

ಇನ್ನೊಂದೆಡೆ ಘಟನೆಯಿಂದ ಆಘಾತಗೊಂಡಿರುವ ಪೋಷಕರು, ಮಗು ಸುರಕ್ಷಿತವಾಗಿ ಮರಳಿ ಸಿಗಲೆಂದು ಪೂಜೆ, ಪುನಸ್ಕಾರ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಕೋತಿಗಳು ಜನರ ಮೇಲೆ ದಾಳಿ ಮಾಡಿದ್ದವು. ಈ ಬಗ್ಗೆ ದೂರು ನೀಡಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...