alex Certify
ಕನ್ನಡ ದುನಿಯಾ       Mobile App
       

Kannada Duniya

ಶೂ ಕೆಸರಾಗಬಾರದೆಂದು ಬೆಂಬಲಿಗರ ಹೆಗಲೇರಿದ ಶಾಸಕ

odisha-mla-manas-madkami-ani_650x400_41499913910

ಓಡಿಶಾದ ಮಲ್ಕನ್ಗಿರಿ ಕ್ಷೇತ್ರದ ಬಿಜೆಡಿ ಶಾಸಕ ಮನಸ್ ಮದ್ಕಮಿ ಹೊಸ ವಿವಾದದಲ್ಲಿ ಸಿಲುಕಿದ್ದಾರೆ. ತಮ್ಮ ಶುಭ್ರ ಬಿಳಿ ಬಣ್ಣದ ಹೊಚ್ಚ ಹೊಸ ಬ್ರಾಂಡೆಡ್ ಶೂ ಕೆಸರಾಗತ್ತೆ ಅನ್ನೋ ಕಾರಣಕ್ಕೆ ಶಾಸಕರು ನೆಲದ ಮೇಲೆ ನಡೆದಿಲ್ಲ. ಬದಲಾಗಿ ಬೆಂಬಲಿಗರ ಹೆಗಲೇರಿದ್ದಾರೆ.

ಶಾಸಕ ಮನಸ್ ಹಾಗೂ ಸಂಸದ ಬಾಲಬಧ್ರ ಮಝಿ ಇಬ್ಬರೂ ಮೋಟು ಬಳಿ ಯೋಜನೆ ಉದ್ಘಾಟನೆಗಾಗಿ ಆಗಮಿಸಿದ್ರು. ಮಳೆಗಾಲವಾಗಿದ್ದರಿಂದ ಗ್ರಾಮದಲ್ಲಿ ರಸ್ತೆಗಳು ಕೆಸರಾಗಿದ್ವು, ಅಲ್ಲಲ್ಲಿ ಮಣ್ಣು ನೀರು ಹರಿಯುತ್ತಿತ್ತು.

ಬಿಳಿ ಪ್ಯಾಂಟ್ ಹಾಗೂ ಬಿಳಿ ಶೂ ಧರಿಸಿದ್ದ ಶಾಸಕರನ್ನು ಬೆಂಬಲಿಗರು ಹೆಗಲ ಮೇಲೆ ಎತ್ತಿಕೊಂಡು ಹೋಗಿದ್ದಾರೆ. ಆದ್ರೆ ಸಂಸದ ಬಾಲಬಧ್ರ ಮಾತ್ರ ನಡೆದುಕೊಂಡೇ ತೆರಳಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಶಾಸಕರ ವರ್ತನೆ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.

ಆದ್ರೆ ಶಾಸಕ ಮನಸ್ ಮಾತ್ರ ತಮ್ಮನ್ನು ಎತ್ತಿಕೊಳ್ಳುವಂತೆ ಬೆಂಬಲಿಗರಿಗೆ ಸೂಚಿಸಿರಲಿಲ್ಲ. ತಮ್ಮ ಮೇಲೆ ಅವರಿಟ್ಟಿರುವ ಅಭಿಮಾನ ಮತ್ತು ಪ್ರೀತಿ ಇದು ಅಂತಾ ಸಮರ್ಥಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...