alex Certify
ಕನ್ನಡ ದುನಿಯಾ       Mobile App
       

Kannada Duniya

ನ್ಯಾಯಕ್ಕಾಗಿ ಮೋದಿಗೆ ಪತ್ರ ಬರೆದ ಓಡಿಶಾ ಬಾಲೆ

letter

ಓಡಿಶಾದ 11 ವರ್ಷದ ಬಾಲಕಿಯೊಬ್ಬಳು ನ್ಯಾಯಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾಳೆ. ಕಟಕ್ ಜಿಲ್ಲೆ ಪೊಖಾರಿ ಗ್ರಾಮದ ಉಗ್ರಸೇನ್ ಮೊಹಾರಾಣಾ ಎಂಬಾತನ ಪುತ್ರಿ ಶುಭಶ್ರೀ, ಮೋದಿ ಅವರಿಗೆ ಬರೆದ ಪತ್ರದಲ್ಲಿ ತಮ್ಮ ಕುಟುಂಬಕ್ಕಾದ ಅನ್ಯಾಯವನ್ನು ಬಿಚ್ಚಿಟ್ಟಿದ್ದಾಳೆ.

ಶುಭಶ್ರೀಯದ್ದು ತೀರಾ ಬಡ ಕುಟುಂಬ, ಇದ್ದ ತುಂಡು ಭೂಮಿಯನ್ನೂ ಕಬಳಿಸಲು ಗ್ರಾಮಸ್ಥರು ಯತ್ನಿಸಿದ್ದಾರೆ. ಇದನ್ನು ವಿರೋಧಿಸಿದ್ದಕ್ಕೆ ಉಗ್ರಸೇನ್ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಿದ್ದಾರಂತೆ. ಬಲವಂತವಾಗಿ ಇಡೀ ಕುಟುಂಬವನ್ನೂ ಊರಿಂದ ಹೊರಹಾಕಿದ್ದಾರೆ.

ಕಾಂಗರೂ ಕೋರ್ಟ್ ನಲ್ಲಿ ಶುಭಶ್ರೀ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ. ಕಳೆದ 12 ದಿನಗಳಿಂದ ಶುಭಶ್ರೀ ಕುಟುಂಬದವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಮೇಲೆ ನಡೆದ ದೌರ್ಜನ್ಯದ ಬಗ್ಗೆ ದೂರು ಕೊಡಲು ಹೋದ್ರೆ, ಪೊಲೀಸರು ಕಂಪ್ಲೇಂಟ್ ಕೂಡ ದಾಖಲಿಸಿಕೊಳ್ಳುತ್ತಿಲ್ಲ ಅಂತಾ ಬಾಲಕಿ ದೂರಿದ್ದಾಳೆ.

ಡಿಜಿಪಿ ಕೆ.ಬಿ.ಸಿಂಗ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ರೂ ನ್ಯಾಯ ಸಿಕ್ಕಿಲ್ಲ. ಹಾಗಾಗಿ ಬಾಲಕಿ ನೇರವಾಗಿ ಪ್ರಧಾನಿ ಮೋದಿ ಅವರಿಗೇ ಪತ್ರ ಬರೆದಿದ್ದಾಳೆ. ಶುಭಶ್ರೀ ಕುಟುಂಬಕ್ಕೆ ಸೇರಿದ ಜಮೀನಿನಲ್ಲಿ ಇನ್ಯಾರೋ ಮನೆ ಕಟ್ಟಲು ಆರಂಭಿಸಿದ್ದಾರಂತೆ. ದಯವಿಟ್ಟು ತಮಗೆ ನ್ಯಾಯ ಕೊಡಿಸಿ ಅಂತಾ ಬಾಲಕಿ ಪತ್ರದಲ್ಲಿ ಮೋದಿಗೆ ಮನವಿ ಮಾಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...