alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಧಾನಿಯವರಿಗೆ ‘ಅಚ್ಚೆ ದಿನ್’ ನೆನಪಿಸಲು ಯುವಕನಿಂದ ಸಾವಿರಾರು ಕಿ.ಮೀ. ಪಾದಯಾತ್ರೆ

ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ‘ಅಚ್ಚೆ ದಿನ್’ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಅವುಗಳನ್ನು ಈಡೇರಿಸದ ಕಾರಣ ಯುವಕನೊಬ್ಬ ಪಾದಯಾತ್ರೆ ಮೂಲಕ ದೆಹಲಿಗೆ ತೆರಳುತ್ತಿದ್ದು, ಪ್ರಧಾನಿಯವರನ್ನು ಭೇಟಿಯಾಗಿ ಇದನ್ನು ನೆನಪಿಸಲು ಮುಂದಾಗಿದ್ದಾನೆ.

ಒಡಿಶಾದ ರೂರ್ಕೆಲಾದಿಂದ ಮುಕ್ತಿಕಾಂತ್ ಬಿಸ್ವಾಲ್ ಎಂಬ ಯುವಕ ಪಾದಯಾತ್ರೆ ಕೈಗೊಂಡಿದ್ದು, ಈಗಾಗಲೇ 1,350 ಕಿಲೋಮೀಟರ್ ಕ್ರಮಿಸಿ ಉತ್ತರ ಪ್ರದೇಶದ ಆಗ್ರಾ ತಲುಪಿದ್ದಾನೆ.

2015ರಲ್ಲಿ ಒಡಿಶಾ ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಬ್ರಹ್ಮಣಿ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸುವುದು ಹಾಗೂ ಆಸ್ಪತ್ರೆ ಅಭಿವೃದ್ಧಿ ಸೇರಿದಂತೆ ಹತ್ತಾರು ಭರವಸೆಗಳನ್ನು ಅಲ್ಲಿನ ಜನತೆಗೆ ನೀಡಿದ್ದರಂತೆ. ಆದರೆ ಇವುಗಳು ಈಡೇರಿಲ್ಲ ಎನ್ನುತ್ತಿರುವ ಮುಕ್ತಿಕಾಂತ್ ಬಿಸ್ವಾಸ್, ಮೋದಿಯವರನ್ನು ಭೇಟಿಯಾಗಿ ಈ ಕುರಿತು ನೆನಪಿಸುತ್ತೇನೆ ಎಂದಿದ್ದಾನೆ. ಒಂದು ವೇಳೆ ಪ್ರಧಾನಿಯವರ ಭೇಟಿಗೆ ಅವಕಾಶ ಸಿಗದಿದ್ದಲ್ಲಿ ಧರಣಿ ನಡೆಸುವುದಾಗಿ ಬಿಸ್ವಾಸ್ ತಿಳಿಸಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...