alex Certify
ಕನ್ನಡ ದುನಿಯಾ       Mobile App
       

Kannada Duniya

36 ಗಂಟೆಯಲ್ಲಿ ಬರಸಿಡಿಲಿಗೆ 34 ಮಂದಿ ಬಲಿ

sidlilu-dd

ಭುವನೇಶ್ವರ್: ಒಡಿಶಾದ ಅನೇಕ ಜಿಲ್ಲೆಗಳಲ್ಲಿ ಭಾರೀ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಧಾರಾಕಾರ ಮಳೆಯಾಗಿದೆ.

ಈ ಬಾರಿ ಪ್ರಕೃತಿ ವಿಕೋಪದಿಂದ ಹೆಚ್ಚಿನ ಹಾನಿಯಾಗಿದ್ದು, ಅದರಲ್ಲಿಯೂ ಸಿಡಿಲಿನಿಂದ ಭಾರೀ ಪ್ರಮಾಣದಲ್ಲಿ ಜೀವ ಹಾನಿಯಾಗಿದೆ.

ಒಡಿಶಾದ ವಿವಿಧ ಕಡೆಗಳಲ್ಲಿ ಭಾರೀ ಸಿಡಿಲಿಗೆ 36 ಗಂಟೆ ಅವಧಿಯಲ್ಲಿ 34 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಯಾವುದೇ ಪ್ರಕೃತಿ ವಿಕೋಪದಿಂದ ಆಗದಷ್ಟು ಹೆಚ್ಚಿನ ಜೀವ ಹಾನಿ ಸಿಡಿಲಿನಿಂದ ಆಗಿದೆ.

ಒಡಿಶಾದಲ್ಲಿ ಪ್ರತಿ ವರ್ಷ ಸರಾಸರಿ 325 ಮಂದಿ ಸಿಡಿಲಿಗೆ ಬಲಿಯಾಗುತ್ತಿದ್ದಾರೆ. ಇತ್ತೀಚಿನ 5 ವರ್ಷಗಳಲ್ಲಿ 1623 ಮಂದಿ ಸಿಡಿಲಿಗೆ ಬಲಿಯಾಗಿದ್ದಾರೆ.

ವಿಶೇಷ ಪರಿಹಾರ ಆಯುಕ್ತರ ಕಚೇರಿಯಿಂದ ಈ ಮಾಹಿತಿ ನೀಡಲಾಗಿದ್ದು, 2017  ಜುಲೈ 31 ರ ವರೆಗೆ 141 ಮಂದಿ ಸಾವು ಕಂಡಿದ್ದಾರೆ. ಕಳೆದ ವರ್ಷ 397 ಮಂದಿ ಸಿಡಿಲಿಗೆ ಬಲಿಯಾಗಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...