alex Certify
ಕನ್ನಡ ದುನಿಯಾ       Mobile App
       

Kannada Duniya

ವರದಕ್ಷಿಣೆ ರೂಪದಲ್ಲಿ ಈ ಶಿಕ್ಷಕನಿಟ್ಟ ಇಂಥ ಬೇಡಿಕೆ

ವರದಕ್ಷಿಣೆ ರೂಪದಲ್ಲಿ ಹಣ, ವಾಹನ, ಮನೆ ಕೇಳುವವರ ಮಧ್ಯೆ 22 ವರ್ಷದ ಸರೋಜ್ ಕಾಂತ್ ಬಿಸ್ವಾಲ್ ಭಿನ್ನವಾಗಿ ನಿಲ್ತಾನೆ. ಸರೋಜ್ ವರದಕ್ಷಿಣೆ ರೂಪದಲ್ಲಿ ವಧು ಮನೆಯವರಿಂದ 1000 ಸಸ್ಯಗಳನ್ನು ಕೇಳಿದ್ದಾನೆ. ಸರೋಜ್ ಬೇಡಿಕೆ ಕೇಳಿ ಖುಷಿಗೊಂಡ ವಧು ಕಡೆಯವರು ಮದುವೆ ದಿನ ಸಾವಿರ ಸಸಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಒಡಿಶಾದ ಬಲಭದ್ರಪುರ ನಿವಾಸಿ ಸರೋಶ್ ವೃತ್ತಿಯಲ್ಲಿ ಶಿಕ್ಷಕ. ಮದುವೆಗೆ ಪಟಾಕಿ ಸಿಡಿಸೋದು, ಹೂವಿನ ಅಲಂಕಾರ ಮಾಡೋದು ಸರೋಜ್ ಗೆ ಮೊದಲಿನಿಂದಲೂ ಇಷ್ಟವಿರಲಿಲ್ಲ. ಸರಳ ಮದುವೆಯನ್ನು ಸರೋಜ್ ಬಯಸಿದ್ದ. ಮದುವೆ ಮಾತುಕತೆ ವೇಳೆ ಸರೋಜ್ ಒಂದೇ ಷರತ್ತು ವಿಧಿಸಿದ್ದ.

ಗಿಡ ನೆಡುವಂತೆ ಜಾಗೃತಿ ಮೂಡಿಸುವ ಸ್ಥಳೀಯ ಸಂಸ್ಥೆಯೊಂದರ ಸದಸ್ಯನಾಗಿರುವ ಸರೋಜ್ ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ರಶ್ಮಿ ಕೈ ಹಿಡಿದಿದ್ದಾನೆ. ವರನ ಬೇಡಿಕೆ ಕೇಳಿ ರಶ್ಮಿ ಖುಷಿಗೊಂಡಿದ್ದಳಂತೆ. ಜೂನ್ 22ರಂದು ಮದುವೆ ನಡೆದಿದ್ದು, ಮದುವೆ ವೇಳೆ ವರನಿಗೆ ವಧು ಕಡೆಯವರು ಸಸಿಯನ್ನು ನೀಡಿದ್ದಾರೆ. ಇದನ್ನು ಸಂಬಂಧಿಕರಿಗೆ ರಿಟರ್ನ್ ಗಿಫ್ಟ್ ರೂಪದಲ್ಲಿ ನೀಡಿದ್ದಾನೆ ಸರೋಜ್.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...