alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಭಿಣಿಯ ಸಹಾಯಕ್ಕಾಗಿ ಕಾಲ್ನಡಿಗೆಯಲ್ಲೇ ಬಂದ ವೈದ್ಯ

ಓಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬಳ ನೆರವಿಗಾಗಿ ವೈದ್ಯ ಯಗ್ನದತ್ತಾ ರಥ್ ಎಂಬುವವರು ನದಿ ದಾಟಿಕೊಂಡು, ಬೆಟ್ಟ ಹತ್ತಿ ಕಾಲ್ನಡಿಗೆಯಲ್ಲೇ ಆಗಮಿಸಿದ್ದಾರೆ.

ಕುಟಿಯಾ ಕೊಂಢ್ ಎಂಬ ಬುಡಕಟ್ಟು ಪ್ರದೇಶದ ಮಹಿಳೆ, 23 ವರ್ಷದ ಸೀತಾದತ್ತ ಎಂಬಾಕೆಗೆ ಹೆರಿಗೆ ನೋವು ಶುರುವಾಗಿತ್ತು. ಹೆರಿಗೆಯಾಗಿ ಹೆಣ್ಣು ಮಗು ಜನಿಸಿದೆ, ಆದ್ರೆ ಮಾಸು ಚೀಲವೇ ಹೊರಬಂದಿರಲಿಲ್ಲ. ಡಾಕ್ಟರ್ ಯಗ್ನದತ್ತಾ ಅವರ ಆರೋಗ್ಯ ಕೇಂದ್ರ ಈ ಗ್ರಾಮದಿಂದ 7 ಕಿಮೀ ದೂರದಲ್ಲಿದೆ. ಆದ್ರೆ ಅಲ್ಲಿಗೆ ವಾಹನ ಸೌಕರ್ಯವಿಲ್ಲ. ನಡೆದುಕೊಂಡೇ ಹೋಗಬೇಕು.

ಹಾಗಾಗಿ ಹಸಿ ಬಾಣಂತಿಯನ್ನು ಹೇಗೆ ಕೊಂಡೊಯ್ಯುವುದು ಅನ್ನೋದೇ ಗೊತ್ತಾಗದೆ ಕುಟುಂಬಸ್ಥರು ಒದ್ದಾಡುತ್ತಿದ್ರು . ಅರಣ್ಯ ಇಲಾಖೆಗೆ ಸೇರಿದ ಆಂಬ್ಯುಲೆನ್ಸ್ ಸಹಾಯದಿಂದ 4 ಕಿಮೀ ದೂರದವರೆಗೆ ಸೀತಾದತ್ತಳನ್ನು ಕರೆದೊಯ್ಯಲಾಯ್ತು.

ಅಲ್ಲಿಂದ ಮುಂದೆ ರಸ್ತೆಯೇ ಇರಲಿಲ್ಲ. ಕಾಲ್ನಡಿಗೆಯಲ್ಲೇ ಸಾಗಬೇಕಿತ್ತು. ಹಾಗಾಗಿ ಖುದ್ದು ವೈದ್ಯರೇ ಅಲ್ಲಿಗೆ ಬಂದು, ಮಹಿಳೆಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ನಂತರ ತಾಯಿ, ಮಗುವನ್ನು ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ವೈದ್ಯರ ಈ ನಿಸ್ವಾರ್ಥ ಸೇವೆ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...