alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಡಿನಲ್ಲಿ ಕಂದಮ್ಮನನ್ನು ಬಿಟ್ಟುಹೋದ ಪಾಪಿ

598110-odhisa

ಓಡಿಶಾದಲ್ಲಿ ತಾಯಿ ಬಿಟ್ಟು ಹೋಗಿದ್ದ ಹೆಣ್ಣು ಮಗುವೊಂದನ್ನು ರಕ್ಷಣೆ ಮಾಡಲಾಗಿದೆ. ಕೃಷ್ಣಾಚಂದ್ರಪುರದ ಕಾಡಿನಲ್ಲಿ ನವಜಾತ ಶಿಶುವನ್ನು ಬಿಸಾಡಿ ಹೋಗಲಾಗಿತ್ತು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮಗುವನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ.

ಓಡಿಶಾದ ಮಯೂರ್ ಭಂಜ್ ಜಿಲ್ಲೆಯಲ್ಲಿರೋ ಬರಿಪಾದ ನಗರದ ಸಮೀಪ ಈ ಘಟನೆ ನಡೆದಿದೆ. ಹೆಣ್ಣು ಮಗು ಅನ್ನೋ ಕಾರಣಕ್ಕೆ ತಾಯಿ ಅಥವಾ ಆಕೆಯ ಕುಟುಂಬದವರು ಶಿಶುವನ್ನು ಬಿಟ್ಟು ಹೋಗಿರಬಹುದು ಅಂತಾ ಶಂಕಿಸಲಾಗಿದೆ.

ಅಥವಾ ಮಗು ಅವಿವಾಹಿತ ಯುವತಿಗೆ ಜನಿಸಿರಬಹುದು ಅಂತಾ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಮಗು ಅಳುತ್ತಿರುವ ಶಬ್ಧ ಕೇಳಿದ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಮಗುವನ್ನು ಕಾಡಿನಿಂದ ಕರೆತಂದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...