alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಣ್ಣು ಮಗುವಿಗೆ ಯಮನಾದ್ಲು ಈ ಮಹಾತಾಯಿ

maa-1-580x395

ಮಕ್ಕಳಿಗೆ ಅಮ್ಮನೆ ದೇವರು. ಸಣ್ಣ ನೋವಾದ್ರೂ ಮಕ್ಕಳು ಓಡಿ ಬರೋದು ಅಮ್ಮನ ಬಳಿ. ಹಾಗೆ ತಾಯಂದಿರು ಕೂಡ ತಮ್ಮ ಜೀವವನ್ನು ಪಣಕ್ಕಿಟ್ಟು ಕರುಳ ಬಳ್ಳಿಯ ರಕ್ಷಣೆ ಮಾಡ್ತಾರೆ. ಆದ್ರೆ ಜೈಪುರದ ಈ ಮಹಾತಾಯಿ ಮಾತ್ರ ರಾಕ್ಷಸಿ ರೂಪ ತೋರಿದ್ದಾಳೆ. ನಾಲ್ಕು ತಿಂಗಳ ಹೆಣ್ಣು ಮಗುವನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆಗೈದಿದ್ದಾಳೆ.

ಜೈಪುರದ ಶಾಸ್ತ್ರಿ ನಗರದ ಈ ರಾಕ್ಷಿಸಿ ತಾಯಿಯ ಹೆಸರು ನೇಹಾ ಗೋಯಲ್. ಗೋಯಲ್ ಕುಟುಂಬದಲ್ಲಿ 20 ಮಂದಿ ಸದಸ್ಯರಿದ್ದಾರೆ. ಎಲ್ಲರೂ ಒಟ್ಟಿಗೆ ವಾಸವಾಗಿದ್ದಾರೆ. ನೇಹಾ ಗೋಯಲ್ ಗೆ ಇಬ್ಬರು ಹೆಣ್ಣು ಮಕ್ಕಳು. ಒಂದು ಮಗುವಿಗೆ 8 ವರ್ಷವಾದ್ರೆ, ಇನ್ನೊಂದು ಮಗುವಿನ ವಯಸ್ಸು 4 ತಿಂಗಳು.

ಗಂಡು ಮಗುವಿನ ಆಸೆಯಲ್ಲಿದ್ದ ನೇಹಾಗೆ ಹೆಣ್ಣು ಮಗು ಜನಿಸಿದ್ದು ನಿರಾಸೆಯಾಗಿತ್ತು. ಇದರಿಂದ ನೊಂದಿದ್ದ ನೇಹಾ ಒಂದು ದಿನ ತನ್ನ ಕರುಳ ಬಳ್ಳಿಗೆ ಚಾಕು ಹಾಕಿದ್ದಾಳೆ. ಮೂರನೇ ಮಹಡಿಯಲ್ಲಿ ಮಗುವಿನ ಶವ ಸಿಕ್ಕಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರುಮಾಡಿದ್ದಾರೆ. ವಿಚಾರಣೆ ವೇಳೆ ನೇಹಾ ಮೇಲೆಯೇ ಪೊಲೀಸರಿಗೆ ಅನುಮಾನ ಬಂದಿದೆ. ಮಗುವಿನ ರಕ್ತದ ಕಲೆ ನೇಹಾ ಕೈ ಹಾಗೂ ಶೌಚಾಲಯದಲ್ಲಿ ಸಿಕ್ಕಿದೆ. ನೇಹಾಳ ಫೋನ್ ವಶಕ್ಕೆ ಪಡೆದ ಪೊಲೀಸರು ದಂಗಾಗಿದ್ದಾರೆ. ಅದ್ರಲ್ಲಿ ಗಂಡು ಮಗು ಪಡೆಯುವುದು ಹೇಗೆ ಮತ್ತು ಯಾವ ಔಷಧಿ ಸೇವಿಸಬೇಕೆನ್ನುವ ಬಗ್ಗೆ ನೇಹಾ ನೆಟ್ ನಲ್ಲಿ ಸರ್ಚ್ ಮಾಡಿದ್ದಾಳೆ. ವಿಚಾರಣೆ ವೇಳೆ ಎಲ್ಲವನ್ನೂ ನೇಹಾ ಬಾಯಿಬಿಟ್ಟಿದ್ದಾಳೆ. ಆಸ್ತಿ- ಅಂತಸ್ತು, ವಿದ್ಯೆ- ಬುದ್ದಿ ಎಲ್ಲವೂ ಇದ್ದರೂ ನೇಹಾ ಯಾಕೆ ಈ ಕೆಟ್ಟ ಕೆಲಸಕ್ಕಿಳಿದಳು ಎಂಬುದೇ ಎಲ್ಲರನ್ನು ಸದ್ಯ ಕಾಡ್ತಿರುವ ಪ್ರಶ್ನೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...