alex Certify
ಕನ್ನಡ ದುನಿಯಾ       Mobile App
       

Kannada Duniya

ಕೇರಳ ಬಿಷಪ್ ಗೆ ಹೆಚ್ಚಾಯ್ತು ಸಂಕಷ್ಟ

ಅತ್ಯಾಚಾರದ ಆರೋಪ ಎದುರಿಸುತ್ತಿರುವ ಕೇರಳದ ಬಿಷಪ್ ಫ್ರಾನ್ಕೋ ಮುಳಕಲ್ ಗೆ ಈಗ ಸಂಕಷ್ಟ ಹೆಚ್ಚಾಗಿದೆ. ಮಂಗಳವಾರ ಅತ್ಯಾಚಾರದ ಆರೋಪದ ಮೇಲೆ ವಶಕ್ಕೆ ಪಡೆದ ಪೊಲೀಸರು ಬುಧವಾರ ಏಳು ಗಂಟೆಗೂ ಹೆಚ್ಚು ಕಾಲ ಅವರನ್ನ ವಿಚಾರಣೆಗೆ ಒಳಪಡಿಸಿದರು. ಗುರುವಾರವೂ ಬಿಷಪ್ ರನ್ನು ಕೇರಳ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ಮೊದಲ ಹಂತದ ವಿಚಾರಣೆ ಮುಗಿದಿದ್ದು ಗುರುವಾರ ಬೆಳಗ್ಗೆ 11 ಗಂಟೆಯ ನಂತರ ಎರಡನೇ ಹಂತದ ವಿಚಾರಣೆ ಶುರುವಾಗಲಿದೆ. ಬಿಷಪ್ ಮುಳಕ್ಕಲ್ ಅವರ ಪ್ರಶ್ನೋತ್ತರದ ಅವಧಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಅಂತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರ ತನಿಖೆಗೆ ಬಿಷಪ್ ಸೂಕ್ತವಾಗಿ ಸ್ಪಂದಿಸುತ್ತಿದ್ದಾರಂತೆ.

ಕೇರಳ ಹೈಕೋರ್ಟ್ಗೆ ಬಿಷಪ್ ಪರ ವಕೀಲರು ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಸೆಪ್ಟೆಂಬರ್ 25ರ ಒಳಗೆ ಬಿಷಪ್ ರನ್ನ ಹೆಚ್ಚಿನ ವಿಚಾರಣೆಗೆ ನ್ಯಾಯಾಂಗದ ವಶಕ್ಕೆ ನೀಡುವ ಸಾಧ್ಯತೆಗಳೇ ಹೆಚ್ಚಾಗಿದೆಯಂತೆ. ಪೊಲೀಸರು ವಿಚಾರಣೆಗೆ ಆಗಮಿಸುವ ಮೊದಲೇ ಬಿಷಪ್ ನಿರೀಕ್ಷಣಾ ಜಾಮೀನಿಗೆ ಪ್ರಯತ್ನಿಸಿದ್ದರು. ಆದ್ರೆ ಕೋರ್ಟ್ ಬಿಷಪ್ ಗೆ ಜಾಮೀನು ನಿರಾಕರಿಸಿತ್ತು.

ಚರ್ಚ್ ನಲ್ಲಿದ್ದ ನನ್ ಗಳೇ ಬಿಷಪ್ ವಿರುದ್ಧ ಅತ್ಯಾಚಾರ ನಡೆಸಿದ ಆರೋಪ ಹೊರಿಸಿದ್ದರು. ಆನಂತರ ಬಂಧನಕ್ಕೆ ಅನೇಕ ಕ್ಯಾಥೋಲಿಕ್ ಕ್ರಿಶ್ಚಿಯನ್ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಆದ್ರೆ ಬಿಷನ್ ಇದನ್ನು ಕಟ್ಟು ಕಥೆ ಅಂತ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...