alex Certify
ಕನ್ನಡ ದುನಿಯಾ       Mobile App
       

Kannada Duniya

ಹಿರಿಯರ ಸಂಖ್ಯೆ ಏರಿಕೆ, ವೃದ್ಧಾಶ್ರಮವಾಗುತ್ತಿರುವ ಹಳ್ಳಿಗಳು

elders-

ನವದೆಹಲಿ: ಹಳ್ಳಿಗಳಲ್ಲಿ ನಿರೀಕ್ಷಿತ ಉದ್ಯೋಗ, ಮಕ್ಕಳಿಗೆ ಶಿಕ್ಷಣ, ಸೌಲಭ್ಯಗಳು ಸಿಗದ ಕಾರಣಕ್ಕೆ, ಈಗಿನ ತಲೆಮಾರು ನಗರ ಪ್ರದೇಶಗಳತ್ತ ಆಕರ್ಷಿತರಾಗಿ ಅಲ್ಲೇ ವಾಸಿಸುತ್ತಾರೆ. ಹಳ್ಳಿಯಲ್ಲಿರುವ ಹಿರಿಯರಿಗೆ ಊರನ್ನು ಬಿಟ್ಟು ಬರಲು ಆಗುವುದಿಲ್ಲ.

ದೇಶದಲ್ಲಿ ಹಿರಿಯ ನಾಗರೀಕರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಸ್ತುತ ದೇಶದಲ್ಲಿ 10.38 ಕೋಟಿಯಷ್ಟು ಹಿರಿಯ ನಾಗರೀಕರಿದ್ದಾರೆ. 2011ರ ಜನಗಣಿತಿಯ ಮಾಹಿತಿಯಂತೆ, ದೇಶದಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಶೇ.8.6ರಷ್ಟು ಹಿರಿಯ ನಾಗರೀಕರಿದ್ದಾರೆ. ಇವರ ಪ್ರಮಾಣ 2001ರಲ್ಲಿ ಶೇ.5.61ರಷ್ಟಿತ್ತು. ಅಂದರೆ, ಆಗ ಒಟ್ಟು ಜನಸಂಖ್ಯೆಯಲ್ಲಿ 7.66 ಕೋಟಿ ಹಿರಿಯರಿದ್ದರು. ದೇಶದಲ್ಲಿರುವ ಹಿರಿಯ ನಾಗರೀಕರಲ್ಲಿ ಶೇ.71 ರಷ್ಟು ಮಂದಿ ಹಳ್ಳಿಗಳಲ್ಲಿಯೇ ವಾಸವಾಗಿದ್ದಾರೆ.

ಶೇ. 29ರಷ್ಟು ಮಂದಿ ನಗರವಾಸಿಗಳಾಗಿದ್ದಾರೆ. ಹಳ್ಳಿಯಲ್ಲಿನ ಹಿರಿಯರಲ್ಲಿ ಶೇ.66 ರಷ್ಟು ಗಂಡಸರು, ಶೇ. 11ರಷ್ಟು ಮಹಿಳೆಯರಿದ್ದಾರೆ. ಅಲ್ಲದೇ, ಹಳ್ಳಿಗಳಲ್ಲಿರುವ ಹಿರಿಯರು ಈಗಲೂ ಕೆಲಸ ಮಾಡುತ್ತಾರೆ. ನಗರವಾಸಿಗಳಿಗೆ ಹೋಲಿಸಿದರೆ, ಹಳ್ಳಿಯಲ್ಲಿರುವ ಹಿರಿಯರು ಶ್ರಮಜೀವಿಗಳಾಗಿದ್ದಾರೆ.

ಹಳ್ಳಿಯಲ್ಲಿನ ಶೇ.46ರಷ್ಟು ಗಂಡಸರು, ಶೇ. 11ರಷ್ಟು ಮಹಿಳೆಯರು ಕೆಲಸ ಕಾರ್ಯ ಮಾಡುತ್ತಾರೆ. ಲಿಂಗಾನುಪಾತ ಪ್ರತಿ ಸಾವಿರ ಪುರುಷರಿಗೆ 1033 ಮಹಿಳೆಯರಿದ್ದಾರೆ. ಮತ್ತೊಂದು ಸಂಗತಿ ಎಂದರೆ, ನಗರ ವಾಸಿಗಳಲ್ಲಿರುವ ಹಿರಿಯರಲ್ಲಿ ಹೃದಯಸಂಬಂಧಿ ಕಾಯಿಲೆ ಹೆಚ್ಚು. ಮಹಿಳೆಯರಲ್ಲಿ ಕೀಲು ನೋವು ಸಮಸ್ಯೆ ಕಾಡುತ್ತದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...