alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯ ನಗ್ನ ಫೋಟೋ, ವಿಡಿಯೋ ತೆಗೆದು ಬ್ಲಾಕ್ಮೇಲ್

ಮಹಾರಾಷ್ಟ್ರದ ಬಾರಾಮತಿ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಹಿಳೆ ಮೇಲೆ ಅತ್ಯಾಚಾರವೆಸಗಿ ನಗ್ನ ಫೋಟೋ ಹಾಗೂ ವಿಡಿಯೋ ತೆಗೆದು ಬ್ಲಾಕ್ಮೇಲ್ ಮಾಡಿದ ಪಾಪಿ 35 ಲಕ್ಷ ರೂಪಾಯಿ ದೋಚಿದ್ದಾನೆ.

26 ವರ್ಷದ ಮಹಿಳೆಯೊಬ್ಬಳು ಮಚ್ಚಿಂದ್ರ ಶಂಕರ್ ವಿರುದ್ಧ ದೂರು ದಾಖಲಿಸಿದ್ದಾಳೆ. ಸೆಪ್ಟೆಂಬರ್ 1 ರಿಂದ ಡಿಸೆಂಬರ್ 3, 2018 ರವರೆಗೆ ಆರೋಪಿ ಬ್ಲಾಕ್ಮೇಲ್ ಮಾಡಿದ್ದಾನಂತೆ. ಪೀಡಿತ ಮಹಿಳೆ ಪತಿ ಹತ್ಯೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದನಂತೆ. ಇದ್ರಿಂದ ಆತನನ್ನು ರಕ್ಷಿಸುವುದಾಗಿ ನಂಬಿಸಿದ ಶಂಕರ್ ಮಹಿಳೆಗೆ ಮೋಸ ಮಾಡಿದ್ದಾನೆ.

ಬಲವಂತವಾಗಿ ಮಹಿಳೆ ಜೊತೆ ಮೊದಲು ಸಂಬಂಧ ಬೆಳೆಸಿದ್ದಾನಂತೆ. ನಂತ್ರ ಜೀವ ಬೆದರಿಕೆ ಹಾಕಿದ್ದಲ್ಲದೆ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಹಾಕುವುದಾಗಿ ಬ್ಲಾಕ್ಮೇಲ್ ಮಾಡಿದ್ದಾನೆ. ನಿರಂತರವಾಗಿ ಮಹಿಳೆ ಮೇಲೆ ಅತ್ಯಾಚಾರವೆಸಗುವ ಜೊತೆಗೆ 35 ಲಕ್ಷ ರೂಪಾಯಿ ಪಡೆದಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...