alex Certify
ಕನ್ನಡ ದುನಿಯಾ       Mobile App
       

Kannada Duniya

ತಿರುಪತಿ ದೇಗುಲದಲ್ಲಿದ್ದ 60 ಟನ್ ವಿದೇಶಿ ನಾಣ್ಯ ವಿಲೇವಾರಿಗೆ ಕೊನೆಗೂ ಸಿಕ್ತು ಪರಿಹಾರ

ದೇಶದ ಅತ್ಯಂತ ಶ್ರೀಮಂತ ದೇಗುಲಗಳಲ್ಲಿ ಒಂದಾಗಿರುವ ತಿರುಪತಿ ತಿಮ್ಮಪ್ಪನ ಹುಂಡಿಯಲ್ಲಿದ್ದ ಸುಮಾರು 60 ಟನ್ ವಿದೇಶಿ ನಾಣ್ಯಗಳ ವಿಲೇವಾರಿಗೆ ಕೊನೆಗೂ ಪರಿಹಾರ ಸಿಕ್ಕಿದೆ. ವಿದೇಶಿ ಭಕ್ತರಿಂದ ಬಂದಿದ್ದ ಈ ನಾಣ್ಯಗಳನ್ನು ಬದಲಾಯಿಸಿಕೊಳ್ಳಲು ಸಾಧ್ಯವಾಗದೆ ದೇವಸ್ಥಾನದ ಆಡಳಿತ ಮಂಡಳಿ ಇಕ್ಕಟ್ಟಿಗೆ ಸಿಲುಕಿದ್ದು, ಈಗ ಸಮಸ್ಯೆ ಬಗೆಹರಿಯಲಿದೆ.

ತಿರುಪತಿ ತಿಮ್ಮಪ್ಪನಿಗೆ ದೇಣಿಗೆಯಾಗಿ ಬಂದ ವಿದೇಶಿ ನೋಟುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬದಲಾಯಿಸಿಕೊಡುತ್ತಿತ್ತಾದರೂ ನಾಣ್ಯಗಳು ಹೆಚ್ಚಿನ ಮೌಲ್ಯ ಹೊಂದಿರದಿದ್ದ ಕಾರಣ ಇದನ್ನು ಭಾರತೀಯ ಕರೆನ್ಸಿಗೆ ಪರಿವರ್ತಿಸಲು ಕಷ್ಟವಾಗಿತ್ತು.

ಈ ನಾಣ್ಯಗಳನ್ನು ಆಯಾ ದೇಶಗಳಿಗೆ ಕಳಿಸಬೇಕೆಂದರೆ ಅದು ದುಬಾರಿ ವೆಚ್ಚವಾಗಿತ್ತು. 1.5 ಕೋಟಿ ರೂ. ಮೌಲ್ಯದ ಒಟ್ಟು 60 ಟನ್ ವಿದೇಶಿ ನಾಣ್ಯ ದೇಗುಲದಲ್ಲಿದ್ದು, ಈಗ ತೆಲುಗು ಅನಿವಾಸಿ ಭಾರತೀಯರ ಸಂಘ ಈ ಸಮಸ್ಯೆಗೆ ಪರಿಹಾರ ಹುಡುಕಿದೆ. ಪೂಜೆಗಳಲ್ಲಿ ನಾಣ್ಯ ಬಳಸುವ ಪದ್ಧತಿ ಭಾರತೀಯರಲ್ಲಿದ್ದು, ಈಗ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿರುವ ವಿದೇಶಿ ನಾಣ್ಯಗಳನ್ನು ಅನಿವಾಸಿ ಭಾರತೀಯರು ಅದೇ ಮೌಲ್ಯಕ್ಕೆ ಪಡೆದುಕೊಳ್ಳಲು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...