alex Certify
ಕನ್ನಡ ದುನಿಯಾ       Mobile App
       

Kannada Duniya

ಅನುರಾಗ್ ಠಾಕೂರ್ ಮಾವನನ್ನೇ ಮಣಿಸಿದ NRI

ಪ್ರಕಾಶ್ ರಾಣಾ ಹಿಮಾಚಲ ಪ್ರದೇಶದಲ್ಲಿ ಹುಟ್ಟಿ ಬೆಳೆದವರು. ಆದ್ರೆ ಸೌದಿ ಅರೇಬಿಯಾದಲ್ಲಿ  ಕೋಟ್ಯಂತರ ರೂಪಾಯಿ ಬೆಲೆಬಾಳುವ ಉದ್ಯಮವನ್ನು ಮುನ್ನಡೆಸುತ್ತಿದ್ದಾರೆ. ಈಗ ಸಕ್ರಿಯ ರಾಜಕಾರಣಕ್ಕೆ ಧುಮುಕಿರೋ ಪ್ರಕಾಶ್ ರಾಣಾ, ಬಿಜೆಪಿಯ ಮಾಜಿ ಸಚಿವ ಗುಲಾಬ್ ಸಿಂಗ್ ಠಾಕೂರ್ ಅವರನ್ನೇ ಮಣಿಸಿದ್ದಾರೆ.

ರಾಣಾ ವಿರುದ್ಧ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಗುಲಾಬ್ ಸಿಂಗ್ ಠಾಕೂರ್, ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರ ಮಾವ. ಇನ್ನೊಂದ್ಕಡೆ ಅನುರಾಗ್ ಠಾಕೂರ್ ಅವರ ತಂದೆ, ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸಿಎಂ ಅಭ್ಯರ್ಥಿಯಾಗಿದ್ದ ಪ್ರೇಮ್ ಕುಮಾರ್ ಧುಮಾಲ್ ಕೂಡ ಸೋಲು ಅನುಭವಿಸಿದ್ದಾರೆ.

30 ವರ್ಷ ಸೌದಿಯಲ್ಲಿದ್ದ ಪ್ರಕಾಶ್ ರಾಣಾ, ಎರಡು  ವರ್ಷಗಳ ಹಿಂದಷ್ಟೆ ತಮ್ಮ ಹುಟ್ಟೂರಿಗೆ ವಾಪಸ್ಸಾಗಿದ್ದರು. ಜನಸೇವೆ ಮಾಡಬೇಕು ಅನ್ನೋ ತಂದೆಯ ಕನಸನ್ನು ನನಸು ಮಾಡಲು ರಾಜಕೀಯ ಸೇರಿದ್ದಾರಂತೆ. ತಮ್ಮ ಉದ್ಯಮದ ಜವಾಬ್ಧಾರಿಯನ್ನು ಮಗನ ಹೆಗಲಿಗೆ ಹೊರಿಸಿದ್ದಾರಂತೆ.

ವಿಶೇಷ ಅಂದ್ರೆ ರಾಣಾ ತಮ್ಮ ಆಸ್ತಿಯಲ್ಲಿ ಶೇ.10ರಷ್ಟನ್ನು ದೇಣಿಗೆಯಾಗಿ ನೀಡುತ್ತ ಬಂದಿದ್ದಾರೆ. ಗ್ರಾಮಕ್ಕೆ ರಸ್ತೆ ನಿರ್ಮಾಣ, ಬಡವರಿಗೆ ಹಣಕಾಸಿನ ನೆರವು, ಬಡ ಹೆಣ್ಣುಮಕ್ಕಳ ಮದುವೆಗೆ ಸಹಾಯ ಹೀಗೆ ವಿವಿಧ ಜನಪರ ಕೆಲಸಗಳನ್ನು ರಾಣಾ ಮಾಡಿದ್ದಾರೆ. ಹಾಗಾಗಿ ಮತದಾರರು ಕೂಡ ಅನುರಾಗ್ ಠಾಕೂರ್ ಮಾವನ ಬದಲು ಎನ್ ಆರ್ ಐಗೆ ಮಣೆ ಹಾಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...