alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಷೂರೆನ್ಸ್ ಹಣಕ್ಕಾಗಿ ದತ್ತು ಮಗನ ಹತ್ಯೆ

son

ಅಹಮದಾಬಾದ್ ನಲ್ಲಿ ಎನ್ ಆರ್ ಐ ದಂಪತಿ ಇನ್ಷೂರೆನ್ಸ್ ಹಣಕ್ಕಾಗಿ ದತ್ತು ಪಡೆದ ಬಾಲಕನನ್ನೇ ಹತ್ಯೆ ಮಾಡಿದ ಆರೋಪ ಎದುರಿಸ್ತಿದ್ದಾರೆ. ಕನ್ವಾಲ್ಜಿತ್ ಸಿನ್ಹ ರಾಯ್ಜಾದಾ ಮತ್ತವನ ಪತ್ನಿ ಆರತಿ ಲೋಕನಾಥ್ ಸದ್ಯ ಲಂಡನ್ ನಲ್ಲಿ ವಾಸವಾಗಿದ್ದಾರೆ. 13 ವರ್ಷದ ಬಾಲಕ ಗೋಪಾಲ್ ಹತ್ಯೆಯಲ್ಲಿ ಅವರ ಕೈವಾಡ ಇದೆ ಅಂತಾ ಕೆಶೋದ್ ಪೊಲೀಸರು ತಿಳಿಸಿದ್ದಾರೆ.

ನಿತೀಶ್ ಮುಂಡ್ ಎಂಬಾತನ ಬಳಿ ಗೋಪಾಲ್ ನನ್ನು ದತ್ತು ಪಡೆದು ಅವನ ಹೆಸರಲ್ಲಿ ಇನ್ಷೂರೆನ್ಸ್ ಮಾಡಿಸುವಂತೆ ಆರತಿ ಮತ್ತಾಕೆಯ ಪತಿ ಸೂಚಿಸಿದ್ದಾರೆ. ಗೋಪಾಲ್ ಹೆಸರಲ್ಲಿ 1.20 ಕೋಟಿ ರೂಪಾಯಿ ಇನ್ಷೂರೆನ್ಸ್ ಮಾಡಿಸಲಾಗಿತ್ತು. ಗೋಪಾಲ್ ನನ್ನು ಕೊಂದು ಇನ್ಷೂರೆನ್ಸ್ ಹಣವನ್ನು ಲಪಟಾಯಿಸಲು ಆರತಿ, ಅವಳ ಪತಿ ಕನ್ವಾಲ್ಜಿತ್ ಹಾಗೂ ನಿತೀಶ್ ಸ್ಕೆಚ್ ಹಾಕಿದ್ರು.

ನೀತೀಶ್ ಕೂಡ ಮೊದಲು ಲಂಡನ್ ನಲ್ಲೇ ಇದ್ದ. ವೀಸಾ ಮುಗಿದ ಬಳಿಕ ಅಹಮದಾಬಾದ್ ಗೆ ಮರಳಿದ್ದ. 2015ರಿಂದ್ಲೂ ಗೋಪಾಲ್ ನನ್ನು ಕೊಲ್ಲಲು ಮೂವರೂ ಪ್ಲಾನ್ ಮಾಡ್ತಾನೇ ಇದ್ರು. ಫೆಬ್ರವರಿ 8ರಂದು ಬೈಕ್ ನಲ್ಲಿ ಬಂದ ಅಪರಿಚಿತರು ಗೋಪಾಲ್ ಗೆ ಚಾಕುವಿನಿಂದ ಚುಚ್ಚಿದ್ರು. ತೀವ್ರ ಗಾಯಗೊಂಡಿದ್ದ ಗೋಪಾಲ್ ಸೋಮವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ನಿತೀಶ್, ಗೋಪಾಲ್ ಹತ್ಯೆಗಾಗಿ 5 ಲಕ್ಷ ರೂಪಾಯಿ ಸುಪಾರಿ ಕೊಟ್ಟಿದ್ದ. ನಿತೀಶ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಗೋಪಾಲ್ ಹತ್ಯೆಯಲ್ಲಿ ಎನ್ ಆರ್ ಐ ದಂಪತಿಯ ಕೈವಾಡವಿರುವುದು ಬಯಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...