alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಷುಲ್ಲಕ ಕಾರಣಕ್ಕೆ ಹತ್ಯೆಗೀಡಾದ ಅನಿವಾಸಿ ಭಾರತೀಯ

ಗುರುಗ್ರಾಮ: ಅನಿವಾಸಿ ಭಾರತೀಯ ಉದ್ಯಮಿಯೋರ್ವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಕಾರಣ, ಹೃದಯಾಘಾತದಿಂದ ಸಾವನ್ನಪ್ಪಿದ್ದು, ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಸೊಮೌ ಬಲಯ(50) ಗುರುಗ್ರಾಮದ ಡಿಎಲ್‌ಎಫ್‌ ಫೇಸ್‌ 2 ಟೌನ್‌ಶಿಪ್‌ನಲ್ಲಿ ಭದ್ರತಾ ಸಿಬ್ಬಂದಿ ಜತೆ ವಾಗ್ವಾದಕ್ಕಿಳಿದಿದ್ದರು. ಈ ವೇಳೆ ಪ್ರದೀಪ್‌ ಸಿಂಗ್‌ ಹಾಗೂ ಆತನ ಕೆಲಸಗಾರ ಮನಿಕ್‌ ಖೋಸ್ಲ ಉದ್ಯಮಿ ಮೇಲೆ ಹಲ್ಲೆ ನಡೆಸಿದ್ದರು. ಸ್ಥಳವೊಂದಕ್ಕೆ ತೆರಳಲು ದಾರಿ ಕೇಳಿದ ಉದ್ಯಮಿ, ಭದ್ರತಾ ಸಿಬ್ಬಂದಿ ತಪ್ಪಾಗಿ ಮಾಹಿತಿ ನೀಡುತ್ತಿದ್ದಾನೆ ಎಂದು ಆರೋಪಿಸಿ ಜಗಳಕ್ಕಿಳಿದಿದ್ದರು.

ಈ ವೇಳೆ ಸಿಬ್ಬಂದಿ, ಉದ್ಯಮಿಗೆ ಜೋರಾಗಿ ಥಳಿಸಿದ್ದಾರೆ. ಎದೆ ಭಾಗಕ್ಕೆ ತೀವ್ರ ಘಾಸಿಯಾದ ಹಿನ್ನೆಲೆಯಲ್ಲಿ ಅಲ್ಲೇ ಕುಸಿದು ಬಿದ್ದು, ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ವೇಳೆ ಹೃದಯಾಘಾತದಿಂದ ಸಾವು ಸಂಭವಿಸಿರುವುದು ಬೆಳಕಿಗೆ ಬಂದಿದೆ. ಕಳೆದ 25 ವರ್ಷದಿಂದ ಅಮೆರಿಕಾದ ಟೆಕ್ಸಾಸ್‌ನಲ್ಲಿ ನೆಲೆಸಿರುವ ಸೊಮೌ ಬಲಯ, ಅಲ್ಲಿ ಐಟಿ ಸಂಸ್ಥೆಯನ್ನು ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...