alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 20 ಸಾವಿರ ರೂ. ಗೆ ಸಿಗ್ತಿದೆ ಮಿನಿ ಬಾರ್ ಲೈಸೆನ್ಸ್!

ಮದ್ಯ ಪ್ರಿಯರಿಗೆ ಹರಿಯಾಣ ಸರ್ಕಾರ ಖುಷಿ ಸುದ್ದಿಯೊಂದನ್ನು ನೀಡಿದೆ. ಕೇವಲ 20 ಸಾವಿರ ರೂ. ಪಾವತಿಸಿ ಮನೆಯಲ್ಲೇ ಮಿನಿ ಬಾರ್ ಆರಂಭಿಸುವ ಅವಕಾಶವನ್ನು ನೀಡಲು ಸರ್ಕಾರ ಮುಂದಾಗಿದೆ.

20 ಸಾವಿರ ರೂ. ಪಾವತಿ ಮಾಡಿದರೆ ಸಾಕು ಲೈಸೆನ್ಸ್ ನೀಡುವ ಸರ್ಕಾರ, ಪದೇ ಪದೇ ಇದನ್ನು ರಿನ್ಯೂವಲ್ ಮಾಡುವ ಅಗತ್ಯವಿಲ್ಲ. ಜೀವನಪರ್ಯಂತ ಈ ಲೈಸೆನ್ಸ್ ಜಾರಿಯಲ್ಲಿರುತ್ತದೆ ಎಂದು ತಿಳಿಸಿದೆ. ಆದರೆ ಮನೆಯಲ್ಲಿ ಹೆಚ್ಚು ಜನರನ್ನು ಸೇರಿಸಿಕೊಂಡು ಪಾರ್ಟಿ ಮಾಡಲು ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

20 ಸಾವಿರ ರೂ. ಪಾವತಿಸಿ ಮಿನಿ ಬಾರ್ ಲೈಸೆನ್ಸ್ ಪಡೆದವರು 750 ಎಂ.ಎಲ್. ನ 12 ಬಾಟಲ್ ವಿದೇಶಿ ಮದ್ಯ, 750 ಎಂ.ಎಲ್. ನ 24 ಬಾಟಲ್ ದೇಶಿಯವಾಗಿ ತಯಾರಾದ ವಿದೇಶಿ ಮದ್ಯ, 750 ಎಂ.ಎಲ್. ನ 12 ಬಾಟಲ್ ರಮ್, 650 ಎಂ.ಎಲ್. ನ 24 ಬಾಟಲ್ ಬಿಯರ್, 750 ಎಂ.ಎಲ್. ನ 24 ಬಾಟಲ್ ವೈನ್, 750 ಎಂ.ಎಲ್. ನ 12 ಬಾಟಲ್ ವೋಡ್ಕಾವನ್ನು ಸಂಗ್ರಹಿಸಿಟ್ಟುಕೊಳ್ಳಬಹುದಾಗಿದೆ.

ಈ ಲೈಸೆನ್ಸ್ ಹರಿಯಾಣದಲ್ಲಿ ಮಾತ್ರ ಲಭ್ಯವಾಗಲಿದ್ದು, ಒಂದು ವೇಳೆ ವಿಳಾಸ ಬದಲಾದರೆ ಸೂಕ್ತ ಮಾಹಿತಿ ನೀಡಿ ಯಾವುದೇ ಶುಲ್ಕವಿಲ್ಲದೆ ಬದಲಾಯಿಸಿಕೊಳ್ಳಬಹುದಾಗಿದೆ.

ಯಾವುದೇ ವ್ಯಕ್ತಿ ಅನುಮತಿಯಿಲ್ಲದೆ ಮನೆಯಲ್ಲಿ 4 ಬಾಟಲ್ ಗಿಂತ ಅಧಿಕ ಮದ್ಯ ಹಾಗೂ 12 ಬಾಟಲ್ ಗೂ ಮೇಲ್ಪಟ್ಟು ಬಿಯರ್ ಸಂಗ್ರಹಿಸಿಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಈ ಹಿನ್ನಲೆಯಲ್ಲಿ ಮಿನಿ ಬಾರ್ ಲೈಸೆನ್ಸ್ ವಿತರಿಸಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...