alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ಲೈನ್ ನಲ್ಲಿ ಸಿಗುತ್ತೆ ಸಗಣಿ..!

You-can-now-buy-cow-dung-online

ಇದು ಆನ್ಲೈನ್ ಯುಗ. ಡ್ರೆಸ್, ಊಟ, ಮನೆ ಸಾಮಗ್ರಿ ಏನು ಬೇಕು ಎಲ್ಲವೂ ಆನ್ಲೈನ್ ನಲ್ಲಿ ಸಿಗುತ್ತೆ. ಈಗ ಸಗಣಿ ಕೂಡ ಸಿಗುತ್ತೆ ಅಂದ್ರೆ ನಂಬ್ತೀರಾ?

ಶ್ರಾವಣ ಮಾಸ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡಲಾಗುತ್ತೆ. ಅದಕ್ಕೆ ಸಗಣಿಯನ್ನು ಬಳಸ್ತಾರೆ. ಹಾಗಾಗಿ ದನದ ಸಗಣಿಗೂ ಆನ್ಲೈನ್ ನಲ್ಲಿ ಬೇಡಿಕೆ ಹೆಚ್ಚಾಗಿದೆ. ಸಗಣಿಯ ಬೆರಣಿ ಎಷ್ಟು ಬೇಕೆಂದು ತಿಳಿಸಿದರೆ, ಮನೆಗೆ ಡಿಲೆವರಿ ಮಾಡಲಾಗುತ್ತದೆ.

ಇದರ ಬೆಲೆ ಏನೂ ಕಡಿಮೆ ಇಲ್ಲ. ಒಂದು ಡಜನ್ ಸಗಣಿಯ ಬೆರಣಿ ಬೆಲೆ 150 ರೂಪಾಯಿಗಿಂತ ಜಾಸ್ತಿ. ವಿದೇಶದಲ್ಲಿ ಇದರ ಬೆಲೆ ಮತ್ತಷ್ಟು ಹೆಚ್ಚು. ವಿದೇಶಗಳಲ್ಲಿ ಭಾರತೀಯರ ಸಂಖ್ಯೆ ಜಾಸ್ತಿ ಇದೆ. ಅವರು ಅಲ್ಲಿ ಪೂಜೆ, ಹೋಮಗಳನ್ನು ಮಾಡುತ್ತಾರೆ. ಅದಕ್ಕೆ ಅವಶ್ಯವಿರುವ ವಸ್ತುಗಳು ಅಲ್ಲಿನ ಮಾರುಕಟ್ಟೆಯಲ್ಲಿ ಸಿಗದ ಕಾರಣ, ಅವರ ಅವಶ್ಯಕತೆಗಳನ್ನು ಆನ್ಲೈನ್ ವೆಬ್ ಸೈಟ್ ಗಳು ಪೂರೈಸುತ್ತಿವೆ. ಕೇವಲ ಮಾರಾಟವೊಂದೇ ಅಲ್ಲ ಸಗಣಿಯಿಂದಾಗುವ ಉಪಯೋಗಗಳ ಬಗ್ಗೆಯೂ ವೆಬ್ ಸೈಟ್ ಮಾಹಿತಿ ನೀಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...